ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಮ್ ಆದ್ಮಿ ಸೇರಲಿದ್ದಾರೆ ನಿವೃತ್ತ ಕೆಎಎಸ್ ಅಧಿಕಾರಿ ಕೆ.ಮಥಾಯ್

ಬೆಂಗಳೂರು : ಬೆಂಗಳೂರು ನಗರ ಪೊಲೀಸ್ ಕಮೀಷನರ್ ಆಗಿದ್ದ ಭಾಸ್ಕರ್ ರಾವ್ ನಿನ್ನೆಯಷ್ಟೇ ಆಮ್​ ಆದ್ಮಿ ಪಾರ್ಟಿ ಸೇರ್ಪಡೆಗೊಂಡರು. ಸಧ್ಯ ಮತ್ತೊಬ್ಬ ಅಧಿಕಾರಿ ರಾಜಕೀಯದತ್ತಾ ಮುಖ ಮಾಡಿದ್ದು, KAS ಅಧಿಕಾರಿಯಾಗಿದ್ದ ಕೆ‌. ಮಥಾಯ್ ಮುಂದಿನ ವಾರ ಆಮ್ ಆದ್ಮಿ ಪಾರ್ಟಿಗೆ ಸೇರಲಿದ್ದಾರೆ.

KAS ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಕೆ‌. ಮಥಾಯ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯವರು. ಸಕಾಲ, ಬಿಬಿಎಂಪಿ ಜಾಹಿರಾತು ವಿಭಾಗದಲ್ಲಿ ಅಧಿಕಾರಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಸಧ್ಯ ಮುಂದಿನ ವಾರ ಆಮ್ ಆದ್ಮಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ.

ಅಂದ್ಹಾಗೆ, 2020ರಲ್ಲಿ ಸೇವೆಯಿಂದ ನಿವೃತ್ತರಾದ ಕೆ. ಮಥಾಯಿ ಅವ್ರು, ತಮ್ಮ ಹಲವಾರು ದಿಟ್ಟ ಕ್ರಮಗಳಿಂದ ಸರ್ಕಾರವನ್ನ ಹಲವು ಬಾರಿ ಎದುರುಹಾಕಿಕೊಂಡು ಸುದ್ದಿಯಾಗಿದ್ದರು.

Edited By : Nagaraj Tulugeri
PublicNext

PublicNext

05/04/2022 05:50 pm

Cinque Terre

34.91 K

Cinque Terre

3