ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಖಾತಾಬುಕ್ ಸಂಸ್ಥಾಪಕ ಮಾಡಿದ ಆ ಒಂದು ಟ್ವೀಟ್‌ನಿಂದ ಏನೇನಾಗಿದೆ ಗೊತ್ತಾ?

ಬೆಂಗಳೂರು: ಸ್ಟಾರ್ಟ್‌ಅಪ್‌ಗಳ ರಾಜಧಾನಿ, ದೇಶದ ಐಟಿ ಸಿಟಿ ಆಗಿರುವ ಬೆಂಗಳೂರಿನ ಸ್ಟಾರ್ಟ್‌ ಅಪ್‌ಗ್ಳ ಮೇಲೆ ನೆರೆಯ ತೆಲಂಗಾಣ ಸರಕಾರ ಕಣ್ಣು ಹಾಕಿದೆ. ಉದ್ಯಾನನಗರಿಯ ರಸ್ತೆ, ಫ‌ುಟ್‌ಪಾತ್‌, ಟ್ರಾಫಿಕ್‌, ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸ್ಟಾರ್ಟ್‌ಅಪ್‌ ಒಂದರ ಸಿಇಒ ಮಾಡಿದ ಟ್ವೀಟ್‌ ಎರಡು ರಾಜ್ಯಗಳ ನಡುವೆ ಅಭಿವೃದ್ಧಿ ಸಮರಕ್ಕೆ ನಾಂದಿ ಹಾಡಿದೆ. ತೆಲಂಗಾಣ ಸಚಿವ ಕೆ.ಟಿ. ರಾಮ ರಾವ್‌, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಸಚಿವರಾದ ಅಶ್ವತ್ಥನಾರಾಯಣ, ಡಾ|ಸುಧಾಕರ್‌ ಭಾಗಿಯಾಗಿದ್ದಾರೆ.

ಮಾ. 30ರಂದು ಖಾತಾಬುಕ್‌ ಮತ್ತು ಹೌಸಿಂಗ್‌ ಡಾಟ್‌ ಕಾಂ ಸ್ಟಾರ್ಟ್‌ಅಪ್‌ನ ಸಿಇಒ ರವೀಶ್‌ ನರೇಶ್‌ ಅವರು ಎಚ್‌ಎಸ್‌ಆರ್‌ ಲೇಔಟ್‌ ಮತ್ತು ಕೋರಮಂಗಲದ ರಸ್ತೆಗಳ ದುಃಸ್ಥಿತಿ ಬಗ್ಗೆ ಟ್ವಿಟರ್‌ನಲ್ಲಿ ಬೆಳಕು ಚೆಲ್ಲಿದ್ದರು. ನಾವು ಬಿಲಿಯನ್‌ ಡಾಲರ್‌ಗಟ್ಟಲೆ ತೆರಿಗೆ ಕಟ್ಟುತ್ತಿದ್ದೇವೆ. ಆದರೆ ಕೆಟ್ಟ ರಸ್ತೆಗಳು, ದಿನನಿತ್ಯ ವಿದ್ಯುತ್‌ ಕಡಿತ, ಕಳಪೆ ದರ್ಜೆಯ ನೀರು ಸಂಪರ್ಕ, ಬಳಸಲಾಗದಂಥ ಫ‌ುಟ್‌ಪಾತ್‌ಗಳನ್ನು ಹೊಂದಿದ್ದೇವೆ. ಬೆಂಗಳೂರಿಗೆ ಹೋಲಿಸಿದರೆ ಹಳ್ಳಿಗಳಲ್ಲೇ ಉತ್ತಮ ಮೂಲಸೌಕರ್ಯಗಳಿವೆ ಎಂದಿದ್ದರು.

ರವೀಶ್​ ನರೇಶ್​ ಅವರ ಈ ಟ್ವೀಟ್​ನ್ನು ರೀಟ್ವೀಟ್ ಮಾಡಿಕೊಂಡ ಹೈದರಾಬಾದ್ ತೆಲಂಗಾಣ​ ಸಚಿವ ಕೆ.ಟಿ.ರಾಮರಾವ್​, ರವೀಶ್​ ನರೇಶ್ ಅವರೇ ನೀವು ನಿಮ್ಮ ಬ್ಯಾಗ್​​ ಪ್ಯಾಕ್​ ಮಾಡಿಕೊಂಡು ನಮ್ಮ ಹೈದರಾಬಾದ್​ಗೆ ಬಂದು ಬಿಡಿ. ಇಲ್ಲಿ ಭೌತಿಕ ಮೂಲಸೌಕರ್ಯ ವ್ಯವಸ್ಥೆ ಅತ್ಯಂತ ಚೆನ್ನಾಗಿದೆ. ಅಷ್ಟೇ ಸಾಮಾಜಿಕ ಮೌಲಸೌಕರ್ಯವೂ ಅತ್ಯುತ್ತಮವಾಗಿದೆ. ವಿಮಾನ ನಿಲ್ದಾಣವೂ ಉತ್ತಮವಾಗಿದೆ. ನಮ್ಮ ಸರ್ಕಾರ ನಾವೀನ್ಯತೆ, ಮೂಲಸೌಕರ್ಯ ಮತ್ತು ಅಂತರ್ಗತ ಬೆಳವಣಿಗೆ ಎಂಬ ಮೂರು ಮಂತ್ರಗಳನ್ನು ಮುಖ್ಯವಾಗಿಟ್ಟುಕೊಂಡು ಕೆಲಸ ಮಾಡುತ್ತದೆ ಎಂದು ಹೇಳಿದ್ದರು. ಅಂದರೆ ನೀವು ನಿಮ್ಮ ನವೋದ್ಯಮವನ್ನು ಹೈದರಾಬಾದ್​ಗೆ ಸ್ಥಳಾಂತರ ಮಾಡಿ ಎಂದು ಹೇಳಿದ್ದರು.

ಕೆ.ಟಿ.ರಾಮರಾವ್​ ಟ್ವೀಟ್​ಗೆ ಕರ್ನಾಟಕ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್​ ಪ್ರತಿಕ್ರಿಯೆ ನೀಡಿ, ಸ್ನೇಹಿತರಾದ ಕೆಟಿಆರ್ ಅವರೇ, ಬೆಂಗಳೂರಿಗಿಂತಲೂ ತೆಲಂಗಾಣದಲ್ಲಿ ಅತ್ಯುತ್ತಮ ಮೂಲಸೌಕರ್ಯ ವ್ಯವಸ್ಥೆ ಇದೆ ಎಂದು ನೀವು ನಿಶ್ಚಿತವಾಗಿ ಹೇಳುತ್ತಿದ್ದೀರಿ. ಈ ಮೂಲಕ ಒಂದು ಸವಾಲು ಹಾಕುತ್ತಿದ್ದೀರಿ. ನಾನು ಆ ಸವಾಲನ್ನು ಸ್ವೀಕರಿಸುತ್ತೇನೆ. 2023ರ ಕೊನೆಯಲ್ಲಿ ಖಂಡಿತವಾಗಿಯೂ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ. ನೋಡುತ್ತಿರಿ, ಬೆಂಗಳೂರಿನ ವೈಭವ ಮತ್ತೆ ಮರುಕಳಿಸುವಂತೆ ಮಾಡುತ್ತೇವೆ. ಭಾರತದ ಅತ್ಯುತ್ತಮ ನಗರವನ್ನಾಗಿ ಮಾರ್ಪಾಡು ಮಾಡುತ್ತೇವೆ ಎಂದು ಹೇಳಿದರು.

“ಡಿಯರ್‌ ಡಿ.ಕೆ.ಶಿ. ಅಣ್ಣಾ, ಸವಾಲನ್ನು ಒಪ್ಪಿಕೊಂಡಿದ್ದೇನೆ. ಹೈದರಾಬಾದ್‌ ಮತ್ತು ಬೆಂಗಳೂರು ನಮ್ಮ ಯುವಜನರಿಗೆ ಉದ್ಯೋಗ ನೀಡುವಲ್ಲಿ, ದೇಶದ ವೈಭವವನ್ನು ಬೆಳಗಿಸುವಲ್ಲಿ ಆರೋಗ್ಯಕರ ಸ್ಪರ್ಧೆ ಮಾಡಲಿ. ಈಗ ಮೂಲಸೌಕರ್ಯ, ಐಟಿ -ಬಿಟಿ ಬಗ್ಗೆ ಗಮನಹರಿಸಿ. ಹಲಾಲ್‌ -ಹಿಜಾಬ್‌ ಬಗ್ಗೆ ಬೇಡ’ ಎಂದು ಡಿಕೆಶಿ ಟ್ವೀಟ್‌ಗೆ ಕೆ.ಟಿ. ರಾಮರಾವ್‌ ಪ್ರತಿಕ

ಉತ್ತಮ ಅಭಿರುಚಿ ಅಲ್ಲ

“ಕೆಟಿಆರ್‌ ಟ್ವೀಟ್‌ ಉತ್ತಮ ಅಭಿರುಚಿ ಹೊಂದಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ಇಂಥ ವರ್ತನೆ ತೋರಬಾರದು. ಭಾರತೀಯರಾದ ನಾವು ಜಗತ್ತಿನ ಎದುರು ಜತೆಯಾಗಿ ಹೋರಾಟ ನಡೆಸಬೇಕು’ ಎಂದು ಸಚಿವ ಅಶ್ವತ್ಥನಾರಾಯಣ ಮರುಟ್ವೀಟ್‌ ಮಾಡಿದ್ದರು.

ಡಿಯರ್‌ ಡಿ.ಕೆ. ಶಿವಕುಮಾರ್‌ ಮತ್ತು ಕೆ.ಟಿ. ರಾಮರಾವ್‌ ಅವರೇ, 2023ರಲ್ಲಿ ನೀವಿಬ್ಬರೂ ಗಂಟುಮೂಟೆ ಕಟ್ಟಿ, ನಿಮಗಿಷ್ಟ ಬಂದ ಸ್ಥಳಕ್ಕೆ ಹೋಗಬಹುದು. ಬಿಜೆಪಿಯ ಡಬಲ್‌ ಎಂಜಿನ್‌ ಸರಕಾರಗಳು ಕರ್ನಾಟಕದ ವೈಭವವನ್ನು ಎತ್ತಿಹಿಡಿಯುವುದಷ್ಟೇ ಅಲ್ಲ, ತೆಲಂಗಾಣವನ್ನು ಪ್ರಗತಿ ಮತ್ತು ಸಮೃದ್ಧಿಯ ಹೆದ್ದಾರಿಯಲ್ಲಿ ಕರೆದುಕೊಂಡು ಹೋಗುತ್ತವೆ.

-ಡಾ| ಕೆ. ಸುಧಾಕರ್‌, ಆರೋಗ್ಯ ಸಚಿವ

ಕೃಷ್ಣ ವರ್ಸಸ್‌ ಚಂದ್ರಬಾಬು ನಾಯ್ಡು ದೇಶದಲ್ಲಿ ಐಟಿ-ಬಿಟಿ ಋತು ಆರಂಭವಾಗುವ ಹೊತ್ತಿನಲ್ಲಿಯೂ ಕರ್ನಾಟಕ ಮತ್ತು ಆಂಧ್ರ ನಡುವೆ ಇಂಥದ್ದೇ ಒಂದು ಪೈಪೋಟಿ ಇತ್ತು. 2000ರಲ್ಲಿ ಈ ಸ್ಪರ್ಧೆ ಆರಂಭವಾಗಿತ್ತು. ಆಗ ಕರ್ನಾಟಕದಲ್ಲಿ ಸಿಎಂ ಆಗಿದ್ದವರು ಎಸ್‌.ಎಂ. ಕೃಷ್ಣ. ಅತ್ತ ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಸಿಎಂ ಆಗಿದ್ದರು. ಐಟಿ ಕಂಪೆನಿಗಳನ್ನು ತಮ್ಮ ಕಡೆಗೆ ಸೆಳೆಯಲು ಇಬ್ಬರೂ ಸಿಎಂಗಳು ಪೈಪೋಟಿ ನಡೆಸುತ್ತಿದ್ದರು. ಆದರೆ ಕೊನೆಗೆ ಗೆದ್ದದ್ದು ಕರ್ನಾಟಕ ಎಂಬುದು ವಿಶೇಷ.

ಒಟ್ಟಿನಲ್ಲಿ ರವೀಶ್ ನರೇಶ್​ರ ಒಂದು ಟ್ವೀಟ್​ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.

Edited By : Nagaraj Tulugeri
PublicNext

PublicNext

05/04/2022 05:41 pm

Cinque Terre

32.22 K

Cinque Terre

0

ಸಂಬಂಧಿತ ಸುದ್ದಿ