ಚಿತ್ರದುರ್ಗ: ಕೆ.ಎಸ್.ಈಶ್ವರಪ್ಪ ದೇಶದ್ರೋಹಿ, ರಾಷ್ಟ್ರಧ್ವಜ ದ್ರೋಹಿ, ಸಂವಿಧಾನ ದ್ರೋಹಿ ಅವರಿಗೆಲ್ಲಾ ನಾನು ಪ್ರತಿಕ್ರಿಯಿಸಲ್ಲ. ಸಿಎಂ ಮಾತಿಗೆ ಉತ್ತರ ಕೊಡಬಹುದು, ರಸ್ತೆಯಲ್ಲಿ ಹೋಗೋರಿಗೆಲ್ಲ ಉತ್ತರಿಸಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮುಸ್ಲಿಮರನ್ನು ಓಲೈಸಲು ಡಿಕೆಶಿ ಸಂವಿಧಾನ ಮೀರಿ ಮಾತನಾಡ್ತಿದ್ದಾರೆಂಬ ಈಶ್ವರಪ್ಪ ಹೇಳಿಕೆಗೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣದಲ್ಲಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು. "ಹಿಜಾಬ್ ಬಗ್ಗೆ ಕಾಂಗ್ರೆಸ್ ನಾಯಕರು ಗಡಸುತನದಿಂದ ಮಾತನಾಡುತ್ತಿಲ್ಲ. ಬಿಜೆಪಿ ದೇಶದಲ್ಲಿ ಅಶಾಂತಿ ಮೂಡಿಸಲು ಟ್ರ್ಯಾಪ್ ಮಾಡುತ್ತಿದೆ. ಹಿಜಾಬ್ ಬಗ್ಗೆ ನಾಯಕರಿಗೆ ಕೊಟ್ಟ ಸೂಚನೆಗೆ ಗೃಹ ಸಚಿವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಭಾವನಾತ್ಮಕವಾಗಿ ತೆಗೆದುಕೊಂಡು ಮಾತಾಡದಂತೆ ಸೂಚಿಸಿದ್ದೇನೆ. ಯಾರು ಮಾತಾಡಬೇಕು ಅವರೇ ಮಾತಾಡಬೇಕು. ಎಲ್ಲರೂ ಪ್ರತಿಕ್ರಿಯಿಸಬಾರದೆಂದು ಸೂಚನೆ ನೀಡಿದ್ದು ನಿಜ" ಎಂದು ಸ್ಪಷ್ಟನೆ ನೀಡಿದರು.
ಅಜಾನ್ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್ ಅವರು, ಅಜಾನ್ ಇಂದು ನಿನ್ನೆಯ ವಿಚಾರ ಅಲ್ಲ, ಧರ್ಮದ ವಿಚಾರ ಅಲ್ಲ. ಬೆಳಗ್ಗೆ ಪ್ರಾರ್ಥನೆಗಾಗಿ ಒಂದು ಇತಿಮಿತಿಯಲ್ಲಿ ಒಂದು ಕೂಗು. ಇಡೀ ಪ್ರಪಂಚದಲ್ಲಿ ಅಜಾನ್ ಬಗ್ಗೆ ದೊಡ್ಡ ಚರ್ಚೆ ಆಗಿದೆ. ನಾವು ನೀವು ಚರ್ಚೆ ಮಾಡುವ ಅಗತ್ಯ ಇಲ್ಲ ಕಾನೂನು, ಸಂವಿಧಾನ ಇದೆ. ಪದ್ಧತಿ ಉಳಿಸಿಕೊಂಡು ಹೋಗಬೇಕಿದೆ ಎಂದರು.
PublicNext
05/04/2022 03:36 pm