ಬೆಂಗಳೂರು: "ಹಲಾಲ್ ಕಟ್, ಜಟ್ಕಾ ಕಟ್ ಬಿಟ್ಟುಬಿಡಿ. ಬೆಲೆ ಏರಿಕೆ ವಿರುದ್ಧ ಹೋರಾಡಿ. ನಾನೂ ಕೇಸರಿ ಶಾಲು ಧರಿಸಿ ಹೋರಾಟಕ್ಕೆ ಬರುತ್ತೇನೆ. ಬೆಲೆ ಏರಿಕೆ ವಿರುದ್ಧ ಹೋರಾಟಕ್ಕೆ ರೆಡಿ ಇದ್ದೀರಾ" ಎಂದು ಜೆಡಿಎಸ್ ನಾಯಕ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಹಿಂದೂ ಸಂಘಟನೆಗಳಿಗೆ ಸವಾಲು ಹಾಕಿದ್ದಾರೆ.
ನಗರದ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲಿ ಇತ್ತು ಜಾತಿ ವ್ಯವಸ್ಥೆ, ಹಿಂದೂ ದೇಶ? ಎಲ್ಲವೂ ನಮ್ಮನಮ್ಮ ಅನುಕೂಲಕ್ಕೆ ಮಾಡಿಕೊಂಡದ್ದು. ಧರ್ಮ ವಿಭಜನೆ ಮಾಡಿ ಮಜಾ ತಗೊಳ್ಳುವವರು, ಉರಿಯುವ ಮನೆಯಲ್ಲಿ ಗಳ ಇರಿಯೋ ಕಾಯಕ ಮಾಡ್ತಿದ್ದೀರಿ. ಬಿಜೆಪಿ ಹಿಂದೂ ಧರ್ಮದಲ್ಲಿ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡಿಲ್ಲ. ಅವರಿಗೆ ಬೇಕಾದಾಗ ಮಾತ್ರ ಒಟ್ಟಿಗೆ ತೆಗೆದುಕೊಳ್ಳುತ್ತಾರೆ. ಇದನ್ನೆಲ್ಲಾ ಇಲ್ಲಿಗೇ ನಿಲ್ಲಿಸಿ, ಬಡವರನ್ನ ರಕ್ಷಿಸಿ ಎಂದು ಕರೆ ಕೊಟ್ಟಿದ್ದಾರೆ.
ಇಷ್ಟೆಲ್ಲಾ ವಿವಾದ ಇದ್ದರೂ ಸಿಎಂ ಬಸವರಾಜ ಬೊಮ್ಮಾಯಿ ಮೌನಿ ಬಾಬಾ ಆಗಿದ್ದಾರೆ. ಮನ್ ಮೋಹನ್ ಸಿಂಗ್ ಮೌನಿ ಅನ್ನುತ್ತಿದ್ದರು ಈಗ ಬೊಮ್ಮಾಯಿ ಮೌನವಾಗಿದ್ದಾರೆ. ಸರ್ಕಾರ ಸ್ವತಂತ್ರವಾಗಿ ನಡೆಯುತ್ತಿಲ್ಲ. ರಿಮೋಟ್ ಕಂಟ್ರೋಲ್‌ನಲ್ಲಿ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
PublicNext
04/04/2022 02:42 pm