ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಈಗೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಪ್ರತಿ ವರ್ಷ ಬೇಸಿಗೆಯಲ್ಲಿ ಸರ್ಕಾರಿ ಕಚೇರಿಗಳ ಕೆಲಸದ ಸಮಯದ ಬದಲಾವಣೆ ಆಗುತ್ತಿತ್ತು. ಆದರೆ ಈ ಸಲ ಆ ಬದಲಾವಣೆ ಇಲ್ಲವೇ ಇಲ್ಲ ಎಂದು ಸಿಎಂ ಈಗಾಗಲೇ ಹೇಳಿ ಬಿಟ್ಟಿದ್ದಾರೆ.
ಉತ್ತರ ಕರ್ನಾಟಕ ವಿಜಯಪುರ,ಬೆಳಗಾವಿ,ಬಾಗಲಕೋಟೆ,ಕಲಬುರ್ಗಿ ಭಾಗಗಳಲ್ಲಿ ಬೇಸಿಗೆಯಲ್ಲಿ ಬಿಸಿಲನ ತಾಪಮಾನ ಅತಿ ಹೆಚ್ಚು ಇರುತ್ತದೆ. ಅದಕ್ಕೇನೆ ಈ ಹಿನ್ನೆಲೆಯಲ್ಲಿಯೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಪತ್ರ ಬರೆದಿದೆ. ಕಚೇರಿಗಳ ಸಮಯ ಬದಲಿಸಿ ಅಂತಲೂ ಕೇಳಿ ಕೊಂಡಿದೆ.
ಆದರೆ, ಕಲಬುರ್ಗಿ ಗಿಂತಲೂ ದೆಹಲಿಯಲ್ಲಿ ಬಿಸಿಲಿನ ತಾಪಮಾನ ಅತೀ ಹೆಚ್ಚ ಇರುತ್ತದೆ. ಅಲ್ಲಿಯೇ ಯಾವುದೇ ರೀತಿ ಬದಲಾವಣೆ ಇರೋದಿಲ್ಲ. ಹಾಗಾಗಿಯೇ ನಮ್ಮ ರಾಜ್ಯದಲ್ಲೂ ಯಾವುದೇ ಸಮಯ ಬದಲಾವಣೆ ಇರೋದಿಲ್ಲ ಅಂತಲೇ ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
PublicNext
04/04/2022 10:12 am