ನವದೆಹಲಿ: ದೇಶದ ಅತಿದೊಡ್ಡ ಪಕ್ಷವೊಂದು ಗೂಂಡಾಗಿರಿಯನ್ನು ಓಲೈಸುವುದರಲ್ಲಿ ತೊಡಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪರೋಕ್ಷವಾಗಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ತಮ್ಮ ನಿವಾಸದ ಮೇಲೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಡೆಸಿದ ದಾಳಿಗೆ ಪ್ರತಿಕ್ರಿಯಿಸಿರುವ ಅವರು, "ಕೇಜ್ರಿವಾಲ್ ಈ ದೇಶಕ್ಕೆ ಮುಖ್ಯವಲ್ಲ. ದೇಶಕ್ಕಾಗಿ ನಾನು ನನ್ನ ಜೀವವನ್ನು ಕೊಡುತ್ತೇನೆ. ಆದರೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ದೇಶದ ಅತಿದೊಡ್ಡ ಪಕ್ಷ ಗೂಂಡಾಗಿರಿ ಪೋಷಿಸುತ್ತಿರುವುದು ದೇಶದ ಜನರಿಗೆ ಕೆಟ್ಟ ಅಭಿಪ್ರಾಯವನ್ನು ರವಾನಿಸಲಿದೆ" ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಕಾಶ್ಮೀರ್ ಫೈಲ್ಸ್ ಚಿತ್ರದ ಕುರಿತಾಗಿ ಹಾಸ್ಯ ಮಾಡಿದ್ದರು ಎಂಬ ಕಾರಣಕ್ಕೆ ಅವರ ಮನೆಯ ಮೇಲೆ ಬಿಜೆಪಿ ಯುವ ಕಾರ್ಯಕರ್ತರು ಬುಧವಾರ ದಾಳಿ ಮಾಡಿದ್ದರು. ಸಿಎಂ ಕೇಜ್ರಿವಾಲ್ ಅವರ ನಿವಾಸದ ಭದ್ರತಾ ಆಸ್ತಿಗಳನ್ನು ಬಿಜೆಪಿ ಕಾರ್ಯಕರ್ತರು ಧ್ವಂಸಗೊಳಿಸಿದ್ದರು. ಸಿಸಿಟಿವಿ ಕ್ಯಾಮೆರಾಗಳು ಹಾಗೂ ಭದ್ರತಾ ತಡೆಗೋಡೆಗಳು ಧ್ವಂಸವಾಗಿದೆ. ಈ ಮೂಲಕ ಕೇಜ್ರಿವಾಲ್ ಹತ್ಯೆಗೆ ಬಿಜೆಪಿ ಯತ್ನಿಸಿದೆ ಎಂದು ಆಪ್ ಮುಖಂಡರು ಆರೋಪಿಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ 8 ಜನರನ್ನು ಈವರೆಗೆ ಬಂಧಿಸಲಾಗಿದೆ.
PublicNext
01/04/2022 01:46 pm