ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯುಗಾದಿ ಬಳಿಕ ರಾಜ್ಯದಲ್ಲಿ ರಾಜಕೀಯ ಪ್ರವಾಹ-ಇಬ್ರಾಹಿಂ

ಬೆಂಗಳೂರು: ರಾಜಕೀಯದಲ್ಲಿ ಏಪ್ರಿಲ್ ಇಲ್ಲವೇ ಮೇ ತಿಂಗಳಲ್ಲಿ ಭಾರಿ ರಾಜಕೀಯ ಪ್ರವಾಹ ಬಂದೇ ಬರುತ್ತದೆ ಎಂದು ಸಿ.ಎಂ ಇಬ್ರಾಹಿಂ ಈಗಲೇ ಭವಿಷ್ಯ ನುಡಿದಿದ್ದಾರೆ.

ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಇಬ್ರಾಹಿಂ ಗುರುವಾರವೇ ರಾಜೀನಾಮೆ ಕೊಟ್ಟಿದ್ದಾರೆ. ಈ ದಿನ ಎಲ್ಲ ಧರ್ಮಗಳಿಗೂ ಶ್ರೇಷ್ಠವಾದ ದಿನ. ಅದಕ್ಕೇನೆ ಈ ದಿನ ರಾಜೀನಾಮೆ ಕೊಟ್ಟಿದ್ದೇನೆ. ನನ್ನ ಮುಂದಿನ ನಡೆ ಇಲ್ಲಿಂದಲೇ ಆರಂಭ ಆಗುತ್ತದೆ ಎಂದು ಸಿ.ಎಂ ಇಬ್ರಾಹಿಂ ಹೇಳಿದ್ದಾರೆ.

ನನ್ನ ಮೇಲೆ ಇಲ್ಲಿವರೆಗೂ ಒಂದು ಹೊರೆ ಇತ್ತು. ಅದನ್ನ ಈಗ ಇಳಿಸಿಕೊಂಡಿದ್ದೇನೆ. ನನ್ನ ಮುಂದಿನ ನಡೆಯನ್ನ ದೇವೇಗೌಡರ ಪಾಲಿಗೆ ಬಿಟ್ಟಿದ್ದೇನೆ.ಅವರೇ ನನಗೆ ಮಾರ್ಗದರ್ಶಕರು ಅಂತಲೂ ಸಿ.ಎಂ ಇಬ್ರಾಹಿಂ ವಿವರಿಸಿದ್ದಾರೆ.

Edited By :
PublicNext

PublicNext

31/03/2022 08:04 pm

Cinque Terre

62.35 K

Cinque Terre

10