ಚಂಡೀಗಢ: ಪಂಜಾಬ್ ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದಿದೆ. ಆದರೆ, ಕೇಂದ್ರ ಸರ್ಕಾರ ಈಗ ಈ ಆಮ್ ಆದ್ಮಿಗೆ ಶಾಕ್ ಕೊಟ್ಟಿದೆ. ಯಾಕೆ ಅಂತಿರೋ ಬನ್ನಿ, ಹೇಳ್ತಿವಿ.
ಪಂಜಾಬ್ ಗ್ರಾಮೀಣಾಭಿವೃದ್ಧಿ ನಿಧಿಯ 1,100 ಕೋಟಿ ರೂಪಾಯಿ ಅನ್ನ ಕೇಂದ್ರ ಸರ್ಕಾರ ಈಗ ತಡೆ ಹಿಡಿದಿದೆ. ಇದರಿಂದ ಸರ್ಕಾರಕ್ಕೆ ಒಂದು ರೀತಿ ಶಾಕ್ ಆಗಿದ್ದು, ಸಾಕಷ್ಟು ಸಮಸ್ಯೆಗಳೂ ಎದುರಾಗೋ ಚಾನ್ಸ್ ಜಾಸ್ತಿನೇ ಇದೆ.
ಕೇಂದ್ರ ಸರ್ಕಾರ ಮೊದಲು ಪಂಜಾಬ್‌ನ ಗ್ರಾಮೀಣಾಭಿವೃದ್ಧಿ ಕಾಯ್ದೆ 1987 ತಿದ್ದುಪಡಿ ಮಾಡಿದೆ.ಬಳಿಕವೇ ಗ್ರಾಮೀಣಾಭಿವೃದ್ಧಿ ನಿಧಿಯನ್ನ ತಡೆ ಹಿಡಿದಿದೆ.ಅಲ್ಲದೇ ಗ್ರಾಮೀಣಾಭಿವೃದ್ಧಿಯ ನಿಧಿಯನ್ನ ಖರೀದಿ ಕೇಂದ್ರಗಳ ಅಭಿವೃದ್ಧಿಗೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಈಗ ಹೇಳಿದೆ.
PublicNext
30/03/2022 04:51 pm