ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

50 ವರ್ಷದ ಅಸ್ಸಾಂ-ಮೇಘಾಲಯ ಗಡಿವಿವಾದ ಅಂತ್ಯ

ನವದೆಹಲಿ: ಅಸ್ಸಾಂ ಮತ್ತು ಮೇಘಾಲಯಗಳ ಗಡಿ ವಿವಾದ ಇಂದು ನಿನ್ನೆಯದಲ್ಲ. ಇದಕ್ಕೆ 50 ವರ್ಷಗಳ ಇತಿಹಾಸವೇ ಇದೆ. ಆದರೆ, ಈ ಒಂದು ವಿವಾದಕ್ಕೆ ಈಗ ತೆರೆ ಬಿದ್ದಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಎರಡೂ ರಾಜ್ಯದ ಸಿಎಂ ಸಹಿ ಹಾಕೋ ಮೂಲಕ ವಿವಾದಕ್ಕೆ ಅಂತ್ಯ ಹಾಡಿದ್ದಾರೆ.

ಅಸ್ಸಾಂ ಸಿಎಂ ಹಿಮಂತ್ ವಿಸ್ವಾ ಹಾಗೂ ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಗಡಿ ವಿವಾದ ಬಗೆ ಹರಿಸಿಕೊಂಡಿದ್ದಾರೆ. ಒಪ್ಪಂದದ ಪತ್ರಕ್ಕೂ ಈಗಾಗಲೇ ಸಹಿ ಹಾಕಿದ್ದಾರೆ.

ಈ ಒಂದು ಒಪ್ಪಂದದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿದ್ದಾರೆ, ಅಸ್ಸಾಂ ಮತ್ತು ಮೇಘಾಲಯದ ಗಡಿ ವಿವಾದ ಈಗ ಅಂತ್ಯಗೊಂಡಿದೆ.ಈ ಒಂದು ದಿನ ನಿಜಕ್ಕೂ ಐತಿಹಾಸಿಕ ದಿನವೇ ಆಗಿದೆ ಅಂತಲೇ ಹೇಳಿದ್ದಾರೆ.

Edited By :
PublicNext

PublicNext

29/03/2022 05:49 pm

Cinque Terre

51.91 K

Cinque Terre

3

ಸಂಬಂಧಿತ ಸುದ್ದಿ