ಬೆಂಗಳೂರು: ಇಲ್ಲಿ ಎಲ್ಲರೂ ಒಂದೇ. ಹಿಂದೂಗಳ ರಕ್ತವೂ ಒಂದೇ. ಮುಸ್ಲಿಮರ ರಕ್ತವೂ ಒಂದೇ. ಕ್ರೈಸ್ತರ ರಕ್ತವೂ ಒಂದೇ. ಬೌದ್ಧರ ರಕವೂ ಒಂದೇ. ಮನುವಾದಿಗಳೇ..ನೀವು ಎಲ್ಲಿಯವರೆಗೂ ಜಾತಿ-ಧರ್ಮದ ಹೆಸರಲ್ಲಿ ಜನರನ್ನು ಒಡೆಯುತ್ತ ಇರುತ್ತೀರೋ ಅಲ್ಲಿಯವರೆಗೆ ಜನ ನಿಮ್ಮನ್ನು ಕ್ಷಮಿಸೋದಿಲ್ಲ. ಜನರ ಕಣ್ಣೀರಿಗೆ ಯಾವುದೇ ಧರ್ಮ ಜಾತಿ ಇಲ್ಲ. ಇಲ್ಲಿ ಎಲ್ಲ ದರ್ಮೀಯರ ಕಣ್ಣೀರೂ ಒಂದೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಂ.ಬಿ ಪಾಟೀಲ್ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಯಿಲೆ ಅಂತ ಬಂದಾಗ ನಾವು ನಮ್ಮವರ ರಕ್ತವೇ ಬೇಕು ಎಂದು ಯಾರೂ ಹೇಳೋದಿಲ್ಲ. ನಾನು ಬದುಕಿದರೆ ಸಾಕು. ರಕ್ತ ಯಾರದ್ದಾದರೂ ಸರಿ ಎನ್ನುತ್ತಾರೆ. ಅದ್ರೆ ಮನುವಾದಿಗಳು ಮನುಷ್ಯರ ನಡುವೆ ಭೇಧ-ಭಾವ ಮಾಡ್ತಿದ್ದಾರೆ. ಹೀಗಾಗಿ ಇವತ್ತು ಸಂಘರ್ಷ ಇರುವುದು ಮನುವಾದ ಮತ್ತು ಮನುಷ್ಯತ್ವದ ನಡುವೆ. ನಮಗೆ ಮನುಷ್ಯತ್ವವೇ ಶ್ರೇಷ್ಟ. ಅಧಿಕಾರ ಇಂದು ಇರುತ್ತೆ. ನಾಳೆ ಹೋಗುತ್ತೆ. ಆದರೆ ನಮಗೆ ಮನುಷ್ಯತ್ವ ಮುಖ್ಯ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.
ಬಿಜೆಪಿಯವರಿಗೆ ಜನಸಮಾನ್ಯರ ಸಮಸ್ಯೆಗಳನ್ನು ನಿವಾರಿಸಲು ಪ್ರಾಶಸ್ತ್ಯ ಕೊಡೋದಿಲ್ಲ. ಈ ಗೋಸುಂಬೆ ಆಟ ಕರ್ನಾಟಕದ ಜನರ ಮುಂದೆ ಬಹಳ ದಿನ ನಡೆಯೋದಿಲ್ಲ. ಜನರಿಗೆ ಮೂಕ ಸೌಕರ್ಯ ಬೇಕು. ಕೋವಿಡ್ ಕಾಲದಲ್ಲಿ ಸಣ್ಣ ಕೈಗರಿಕೆಗಳು ಮುಚ್ಚಿವೆ. ಅಲ್ಲಿ ಉದ್ಯೋಗ ನಷ್ಟವಾಗಿದೆ. ಇದಕ್ಕೆಲ್ಲ ಯಾರು ಹೊಣೆ ಎಂದು ಪ್ರಧಾನಿ ನರೇಂದ್ರ ಮೋದಿಗೆ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
PublicNext
28/03/2022 11:10 pm