ಬೆಂಗಳೂರು: ಪಂಚರಾಜ್ಯಗಳಲ್ಲಿ ಏನೇ ಕಸರತ್ತು ಮಾಡಿದರೂ ಗೆಲುವಿನ ನಗಾರಿ ಬಾರಿಸಲಾಗದೇ ಸೋತು ಸುಣ್ಣವಾದ ಕಾಂಗ್ರೆಸ್ ಗೆ ಸದ್ಯ ಕರ್ನಾಟಕ ಪ್ರತಿಷ್ಠೆಯ ಕಣವಾಗಿದೆ.ರಾಜ್ಯದಲ್ಲಿಯಾದರೂ ಕಾಂಗ್ರಸ್ ನ್ನು ಜೀವಂತವಾಗಿರಿಸಲು ಈಗಾಗಲೇ ಕಾಂಗ್ರೆಸ್ ವಿವಿಧ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ಇದರ ಮಧ್ಯೆ ಇದೇ ಮಾ.31ಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ.
ಬೆಂಗಳೂರಿನಿಂದ ರಸ್ತೆ ಮೂಲಕ ತುಮಕೂರಿಗೆ ತೆರಳಲಿರುವ ರಾಹುಲ್ ಗಾಂಧಿ ತುಮಕೂರಿನ ಸಿದ್ದಗಂಗಾ ಮಠದ ಕಾರ್ಯಕ್ರಮದಲ್ಲಿ ಭಾಗಿಯಾಲಿದ್ದಾರೆ. ಏಪ್ರಿಲ್ 1 ರಂದು ಅಮಿತ್ ಶಾ ಆಗಮನ ಹಿನ್ನಲೆಯಲ್ಲಿ ಹಿಂದಿನ ದಿನವೇ ಅಂದ್ರೆ ಮಾ.31 ರಂದು ರಾಹುಲ್ ಗಾಂಧಿ ಸಿದ್ದಗಂಗಾ ಮಠಕ್ಕೆ ಭೇಟಿಗೆ ಆಗಮಿಸುವಂತೆ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
ಹೀಗಾಗಿ ಒಂದು ದಿನ ಮೊದಲೇ ತುಮಕೂರಿಗೆ ಭೇಟಿ ನೀಡಿ ಅದೇ ದಿನ ದಿಲ್ಲಿಗೆ ವಾಪಾಸ್ ಆಗಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
PublicNext
28/03/2022 08:31 pm