ಮಂಡ್ಯ: ಪ್ರತಿ ಬಾರಿಯೂ ಸಂಸದೆ ಸುಮಲತಾ ಅಂಬರೀಶ್ ಜಗಳ ಹುಟ್ಟುಹಾಕಿಕೊಂಡು, ಕಾಲು ಕೆರೆದು ಜಗಳ ಮಾಡೋದಲ್ಲ. ಶಾಸಕರು ಅಭಿವೃದ್ಧಿ ಕೆಲಸ ಮಾಡಲಿಲ್ಲ ಅಂದ್ರೇ, ಜನರು ಕೇಳ್ತಾರೆ. ಅವರು ಯಾರನ್ನು ಕೇಳಬೇಕು.? ಅದನ್ನು ಅರ್ಥ ಮಾಡಿಕೊಂಡು ಜಗಳ ಮಾಡೋದು ಬಿಟ್ಟು ಕೆಲಸ ಮಾಡಲಿ ಎಂಬುದಾಗಿ ಸಂಸದೆ ಸುಮಲತಾ ಅಂಬರೀಶ್ ಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.
ಸಂಸದರು ಪ್ರತಿ ಸಂದರ್ಭದಲ್ಲಿಯೂ ಬೇರೆಯವರ ಮೇಲೆ ದೂರು ಸಲ್ಲಿಸೋದಕ್ಕಿಂತ ಹೆಚ್ಚಿನದಾಗಿ, ಒಂದು ಬಾರಿ ಅವರು ಆತ್ಮಾವಲೋಕ ಮಾಡಿಕೊಳ್ಳಬೇಕಾಗಿದೆ. ಅವರು ಸಂಸದರಾದ ನಂತ್ರ, ಜಿಲ್ಲೆಗೆ ಅವರು ಕೊಟ್ಟಿರುವಂತ ಕೊಡುಗೆ ಏನು.? ಎಂಬುದನ್ನು ಮೊದಲು ಪ್ರಶ್ನೆ ಮಾಡಿಕೊಳ್ಳಬೇಕು ಎಂದರು.
ಶಾಸಕರೇನು ಜನರು ಆಯ್ಕೆ ಮಾಡಿ ಗೆದ್ದಿದ್ದಾರಲ್ಲ, ಅವರು ಇಲ್ಲಿ ಒಂದು ಬಾರಿ ಆಯ್ಕೆಯಾಗಿದ್ದಲ್ಲ, ಬಹುತೇಕ ಎರಡು ಮೂರು ಬಾರಿ ಆಯ್ಕೆಯಾಗಿರೋರು. ಅವರನ್ನು ಜನರು ಪ್ರಶ್ನೆ ಮಾಡುತ್ತಾರೆ. ಹಾಗಾದ್ರೇ ಇವರನ್ನು ಪ್ರಶ್ನೆ ಮಾಡೋರು ಯಾರು.? ಎಂದರು.
PublicNext
28/03/2022 06:21 pm