ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಮಾಜವಾದಿ ಪಾರ್ಟಿ ನಿರ್ಮಿಸಿದ ಕ್ರೀಡಾಂಗಣದಲ್ಲಿ ಯೋಗಿ ಪ್ರಮಾಣ ವಚನ : ಅಖಿಲೇಶ್ ಯಾದವ್

ಲಖನೌ: ಮಾ.25 ರಂದು ಎರಡನೇ ಅವಧಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ ಲಖನೌದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕನಾ ಸ್ಟೇಡಿಯಂನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸದ್ಯ ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸಮಾಜವಾದಿ ಪಾರ್ಟಿ ನಿರ್ಮಿಸಿದ ಕ್ರೀಡಾಂಗಣದಲ್ಲಿ ಯೋಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದು ಕಿಂಡಲ್ ಮಾಡುವ ಮೂಲಕ

ಹೊಸ ಸರ್ಕಾರಕ್ಕೆ ಅಭಿನಂದನೆಗಳು ಎಂದಿದ್ದಾರೆ.

ಜೊತೆಗೆ ಕೇವಲ ಸರ್ಕಾರ ರಚಿಸಲು ಅಲ್ಲ, ಜನರ ಸೇವೆಗಾಗಿ ಪ್ರಮಾಣ ವಚನ ಸ್ವೀಕರಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ ಪೂರ್ವಾಂಚಲ್ ಎಕ್ಸ್ಪ್ರೆಸ್ ವೇ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳ ಕ್ರೆಡಿಟ್ ಅನ್ನು ಬಿಜೆಪಿ ಕದಿಯುತ್ತಿದೆ ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದರು.ಕೇಶವ್ ಪ್ರಸಾದ್ ಮೌರ್ಯ ಅವರು ಸಿರತುದಿಂದ ಚುನಾವಣೆಯಲ್ಲಿ ಸೋತರೂ ಉಪಮುಖ್ಯಮಂತ್ರಿಯಾಗಿ ಮುಂದುವರಿದಿದ್ದಾರೆ . ದಿನೇಶ್ ಶರ್ಮಾ ಬದಲಿಗೆ ಎರಡನೇ ಉಪ ಮುಖ್ಯಮಂತ್ರಿಯಾಗಿ ಬ್ರಜೇಶ್ ಪಾಠಕ್ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮಾಣವಚನ ಸ್ವೀಕರಿಸಿದ ಪ್ರಮುಖ ಬಿಜೆಪಿ ಮುಖಗಳಲ್ಲಿ ಬೇಬಿ ರಾಣಿ ಮೌರ್ಯ, ಸ್ವತಂತ್ರ ದೇವ್ ಸಿಂಗ್, ಸುರೇಶ್ ಖನ್ನಾ, ನಂದಗೋಪಾಲ್ ನಂದಿ ಮೊದಲಾದವರು ಸೇರಿದ್ದಾರೆ.

Edited By : Nirmala Aralikatti
PublicNext

PublicNext

26/03/2022 03:11 pm

Cinque Terre

36.32 K

Cinque Terre

21

ಸಂಬಂಧಿತ ಸುದ್ದಿ