ಬೆಂಗಳೂರು : ಹಿಜಾಬ್ ವಿಚಾರವಾಗಿ ಮಾತನಾಡುವ ಭರಾಟೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾವಿಧಾರಿಗಳ ಕೋಪಕ್ಕೆ ಗುರಿಯಾಗಿದ್ದಾರೆ.
'ಹಿಜಾಬ್ ವಿವಾದಕ್ಕೆ ಬಿಜೆಪಿಯೇ ಕಾರಣ. ಮುಸ್ಲಿಂ ಹೆಣ್ಣು ಮಕ್ಕಳು ದುಪ್ಪಟ್ಟವನ್ನ ತಲೆಗೆ ಹಾಕಿ ಕೊಳ್ಳುವುದರಲ್ಲಿ ತಪ್ಪೇನಿದೆ? ಹಿಂದೂ ಹೆಣ್ಣು ಮಕ್ಕಳು ತಲೆ ಮೇಲೆ ಬಟ್ಟೆ ಹಾಕಿ ಕೊಳ್ಳಲ್ವಾ? ಸ್ವಾಮೀಜಿಗಳು ತಲೆ ಮೇಲೆ ಬಟ್ಟೆ ಹಾಕುತ್ತಾರೆ. ಅದನ್ನು ನೀವು ಪ್ರಶ್ನಿಸ್ತೀರಾ?' ಎಂದು ಸಿದ್ದರಾಮಯ್ಯ ಹೇಳಿದ್ದರು.
ಸ್ವಾಮೀಜಿ ಪೇಟಕ್ಕೆ ಹಿಜಾಬ್ ಹೋಲಿಸಿದ್ದು ಎಷ್ಟು ಸರಿ? ಸ್ವಾಮೀಜಿಗಳು ತಲೆವಸ್ತ್ರ ಹಾಕಿಕೊಂಡು ಶಾಲೆಯಲ್ಲಿ ಕೂರಲ್ಲ. ಸಿದ್ದು ಸಮಾಜ ಒಡೆಯಲು ಯತ್ನಿಸುತ್ತಿದ್ದಾರೆ ಎಂದು ವ್ಯಾಪಕ ಟೀಕೆ ವ್ಯಕ್ತವಾಗಿದೆ. ಈ ಒಂದು ಹೇಳಿಕೆ ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿದ್ದು ಮಾತ್ರವಲ್ಲದೆ ಸ್ವಪಕ್ಷದವರಿಗೂ ಇರಿಸುಮುರಿಸು ತಂದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಈ ಡ್ಯಾಮೇಜ್ ಕಂಟ್ರೋಲ್ ಗೆ ಕಸರತ್ತು ನಡೆಸುತ್ತಿದ್ದಾರೆ.
ಸಿದ್ದರಾಮಯ್ಯರ ಮಾತಿಗೆ ಗರಂ ಆದ ಬಿಜೆಪಿ ನಾಯಕರು, ಕ್ಷಮೆ ಕೋರುವಂತೆ ಆಗ್ರಹಿಸುತ್ತಿದ್ದಾರೆ.
PublicNext
26/03/2022 08:38 am