ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದರಾಮೇಶ್ವರ ಜಾತ್ರೆಯಲ್ಲಿ ಸಿದ್ದರಾಮಯ್ಯ ಮಸ್ತ್​ ಡ್ಯಾನ್ಸ್​

ಮೈಸೂರು: ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು 40 ನಿಮಿಷಗಳ ಕಾಲ ಸ್ಟೆಪ್‌ ಹಾಕಿ ಗ್ರಾಮಸ್ಥರನ್ನು ಮನರಂಜಿಸಿದ್ದಾರೆ.

ಮೈಸೂರು ಜಿಲ್ಲೆಯ ಸಿದ್ದರಾಮನಹುಂಡಿಯಲ್ಲಿ ಸಿದ್ದರಾಮೇಶ್ವರ ಜಾತ್ರೆ ಅದ್ಧೂರಿಯಾಗಿ ನೆರವೇರಿತ್ತು. ಈ ವೇಳೆ ವೀರ ಕುಣಿತಕ್ಕೆ ಸಿದ್ದರಾಮಯ್ಯ ಕುಣಿದು ಕುಪ್ಪಳಿಸಿದ್ದಾರೆ. ಸಿದ್ದರಾಮಯ್ಯ ಈ ಮುಂಚೆ ಮಂತ್ರಿ, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ ಆದಾಗಲೂ ಸ್ವಗ್ರಾಮಕ್ಕೆ ಬಂದು ತನ್ನ ಗೆಳಯರೊಂದಿಗೆ ಕುಣಿದು ಕುಪ್ಪಳಿಸಿದ್ದರಂತೆ. ಇನ್ನು ಅಪ್ಪನ‌ ಕುಣಿತ ನೋಡಿದ ಪುತ್ರ ಶಾಸಕ ಡಾ.ಯತೀಂದ್ರ ಸಂತಸಗೊಂಡಿದ್ದಾರೆ.

Edited By : Vijay Kumar
PublicNext

PublicNext

25/03/2022 08:42 am

Cinque Terre

64.11 K

Cinque Terre

24

ಸಂಬಂಧಿತ ಸುದ್ದಿ