ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋವಿಡ್ ಬಂದ ಕೆಲವರಿಗೆ ಕ್ಷಯ ರೋಗ ಬಂದಿದೆ;ಆರೋಗ್ಯ ಸಚಿವ ಸುಧಾಕರ್

ಬೆಂಗಳೂರು: ಕೋವಿಡ್ ಸೋಂಕು ತಗ್ಗಿದೆ. ಆದರೆ ಅದರ ಎಫೆಕ್ಟ್ ಮಾತ್ರ ಚಿತ್ರ-ವಿಚಿತ್ರವಾಗಿದೆ.ಕೋವಿಡ್‌ನಿಂದ ಗುಣಮುಖರಾದವರಿಗೆ ಈಗ ಕ್ಷಯ ರೋಗದ ತೊಂದರೆ ಕಾಣುತ್ತಿದೆ. ಸ್ವತಃ ಆರೋಗ್ಯ ಸಚಿವರೇ ಈ ಸತ್ಯವನ್ನ ಈಗ ಬಹಿರಂಗ ಪಡಿಸಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆರೋಗ್ಯ ಸೌಧದಲ್ಲಿ ನಡೆದ ವಿಶ್ವ ಕ್ಷಯರೋಗದ ದಿನ ಕಾರ್ಯಕ್ರಮದಲ್ಲಿ ಇವರು ಮಾತನಾಡಿದ್ದಾರೆ. ಈಗಾಗಲೇ ಕೋವಿಡ್ ನಿಂದ ಅನೇಕರು ಗುಣಮುಖರಾಗಿದ್ದಾರೆ. ಆದರೆ, ಕೆಲವರಿಗೆ ಕ್ಷಯ ರೋಗ ಕಾಣಿಸಿಕೊಂಡಿದೆ. ಆ ಬಗ್ಗೆ ಸಂಪೂರ್ಣ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಕೋವಿಡ್‌ ನಿಂದ ಗುಣಮುಖರಾದವರನ್ನ ಸರ್ಕಾರವೇ ಕ್ಷಯ ರೋಗದ ಪರೀಕ್ಷೆ ಮಾಡಿದೆ. 25 ಲಕ್ಷ ಜನರಲ್ಲಿ 144 ಜನರಿಗೆ ಕ್ಷಯ ರೋಗ ದೃಢಪಟ್ಟಿದೆ ಎಂದು ವಿವರಣೆಯನ್ನೂ ಸಚಿವರುನೀಡಿದ್ದಾರೆ.

Edited By :
PublicNext

PublicNext

24/03/2022 04:50 pm

Cinque Terre

41.52 K

Cinque Terre

3

ಸಂಬಂಧಿತ ಸುದ್ದಿ