ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಡುತ್ತಿಲ್ಲ. ಹಿಜಾಬ್ ವಿವಾದದ ಬಳಿಕವಷ್ಟೇ ಈ ಬೆಳವಣಿಗೆ ಆಗಿದೆ. ಇದನ್ನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತೀವ್ರವಾಗಿ ಖಂಡಿಸಿದ್ದಾರೆ.
ಚರ್ಚ್,ಮಸೀದಿಗಳ ಮುಂದೆ ವ್ಯಾಪಾರ ಮಾಡಬಲೇಬೇಡಿ ಅಂತ ಹಿಂದೂಗಳಿಗೆ ಹೇಳಿದರೆ ಅಗುತ್ತದೇಯೆ ? ಇಲ್ಲ ಅಂದ್ಮೇಲೆ ಯಾಕೆ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಡಲಾಗುತ್ತಿಲ್ಲ. ಇದೆಲ್ಲ ರಾಜಕೀಯ ಬಿಡಿ ಅಂತಲೇ ಡಿಕೆಶಿ ಹೇಳಿದ್ದಾರೆ.
ಬಿಜೆಪಿ ಉದ್ಯೋಗ ಸೃಷ್ಟಿ ಮಾಡಬೇಕು. ರೈತರಿಗೆ ಬೆಂಬಲ ಬೆಲೆ ಕೊಡಬೇಕು. ಇದೆಲ್ಲ ಬಿಟ್ಟು ಮುಸ್ಲಿಂ ವ್ಯಾಪಾರಿಗಳ ಅವಕಾಶವನ್ನ ಕಿತ್ತುಕೊಳ್ಳೋದು ಎಷ್ಟು ಸರಿ. ಒಂದೊಂದು ಸಮುದಾಯ ಒಂದೊಂದು ವೃತ್ತಿ ಮಾಡಿಕೊಂಡು ಬುತ್ತವೆ. ಹೀಗೀರೊವಾಗ ಸರ್ಕಾರ ಹುಡುಗರ ರೀತಿ ರೂಲ್ಸ್ ಮಾಡಿದ್ರೆ ಎಷ್ಟು ಸರಿ ಅಂತಲೇ ಡಿಕೆಶಿ ಪ್ರಶ್ನೆ ಮಾಡಿದ್ದಾರೆ.
PublicNext
23/03/2022 04:27 pm