ನವದೆಹಲಿ: ಸಂಸದರ ಮಕ್ಕಳಿಗೆ ಚುನಾಚಣೆಯಲ್ಲಿ ಟಿಕೆಟ್ ನೀಡದೇ ಇರುವುದು ಪಾಪ ಎನ್ನುವುದಾದರೆ ನಾನು ಆ ಪಾಪವನ್ನು ಮಾಡಿದ್ದೇನೆ ಹಾಗೂ ಮಾಡುತ್ತೇನೆ. ಭಾರತೀಯ ಜನತಾ ಪಕ್ಷದಲ್ಲಿ ಕುಟುಂಬ ರಾಜಕಾರಣಕ್ಕೆ ಎಂದೂ ಅವಕಾಶ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸಂಸದೀಯ ಪಕ್ಷದ ಸಭೆಯಲ್ಲಿ ಹೇಳಿದ್ದಾರೆ.
ಸಂಸದರ ಮಕ್ಕಳಿಗೆ ಟಿಕೆಟ್ ಕಡಿತವಾದರೆ ಅದು ನನ್ನ ಹೊಣೆ. ವಂಶ ರಾಜಕಾರಣ ಮಾಡುವುದಾದರೆ ಅಂತವರಿಗೆ ಬೇರೆ ಪಕ್ಷಗಳಿವೆ ಎಂದು ಸಭೆಯಲ್ಲಿ ಮೋದಿ ಕಟ್ಟುನಿಟ್ಟಾಗಿ ಹೇಳಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ಕೆಲವು ಸ್ಥಾನಗಳನ್ನ ಏಕೆ ಕಳೆದುಕೊಂಡಿತು ಎಂಬುದನ್ನು ನಿರ್ಣಯಿಸಲು ಪ್ರಧಾನಿ ಮೋದಿ ಎಲ್ಲ ಸಂಸದರನ್ನು ಸಭೆಯಲ್ಲಿ ಪ್ರಶ್ನಿಸಿದ್ದಾರೆ. ನಿಮ್ಮ ಪ್ರದೇಶದಲ್ಲಿ ಕಳೆದುಹೋದ 100 ಬೂತ್‌ಗಳನ್ನು ನೀವು ಮೌಲ್ಯಮಾಪನ ಮಾಡಿ ಮತ್ತು ನಾವು ಏಕೆ ಸೋತಿದ್ದೇವೆ ಎಂಬ ವರದಿಯನ್ನ ಸಿದ್ಧಪಡಿಸಿ, ಆ ಸೋಲಿಗೆ ಕಾರಣಗಳನ್ನ ಕಂಡುಹಿಡಿಯಬಹುದು ಮತ್ತು ಸರಿಪಡಿಸಬಹುದು ಎಂದು ಪ್ರಧಾನಿ ಮೋದಿ ಅವರು ಸಂಸದರಿಗೆ ಹೇಳಿದರು.
PublicNext
16/03/2022 11:53 am