ಬೆಂಗಳೂರು: ಸಚಿವ ಡಾ. ಸಿ.ಎನ್ ಅಶ್ವತ್ಥನಾರಾಯಣ, ಕಾಂಗ್ರೆಸ್ ಪಕ್ಷ ಹಾಗೂ ಡಿ.ಕೆ ಶಿವಕುಮಾರ್ ಮೇಲೆ ವಾಗ್ದಾಳಿ ನಡೆಸಿದ್ದಾರೆ. 'ಸೋನಿಯಾ ಗಾಂಧಿ ಕೈ-ಕಾಲು ಹಿಡಿದುಕೊಂಡು ಭಿಕ್ಷೆ ಬೇಡಿದೆ' ಎಂದು ಡಿ.ಕೆ ಶಿವಕುಮಾರ್ ನೀಡಿದ್ದ ಹೇಳಿಕೆ ಸ್ಕ್ರೀನ್ ಶಾಟ್ ಸಮೇತ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿರುವ ಸಚಿವ ಅಶ್ವತ್ಥನಾರಾಯಣ ಡಿಕೆ ಶಿವಕುಮಾರ್ ಅವರು ಭಿಕ್ಷೆ ಬೇಡುವುದರಲ್ಲಿ ಏನೂ ಆಶ್ಚರ್ಯವಿಲ್ಲ ಎಂದಿದ್ದಾರೆ.
'ವ್ಯಕ್ತಿ ಪೂಜೆಯಲ್ಲಿ ನಂಬಿಕೆ ಇಲ್ಲ ಎನ್ನುವ ಡಿಕೆ ಶಿವಕುಮಾರ್ ಅವರು ಅಧ್ಯಕ್ಷ ಸ್ಥಾನದ ಮ್ಯೂಸಿಕಲ್ ಚೇರ್ ಆಡುತ್ತಿರುವ ಸೋನಿಯಾ-ರಾಹುಲ್ ಅವರ ಕೈ-ಕಾಲು ಹಿಡಿದು ಭಿಕ್ಷೆ ಬೇಡುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ.' ಮುಂದೊಮ್ಮೆ "ನಮ್ಮ ಪಕ್ಷ-ನಮ್ಮ ಗುಲಾಮಗಿರಿ" ಎನ್ನುತ್ತಾ ದೆಹಲಿಯ 10ನೇ ಜನ್‌ಪಥ್‌ವರೆಗೆ ಪಾದಯಾತ್ರೆಯನ್ನೂ ಮಾಡಬಹುದು' ಎಂದ ಅಶ್ವತ್ಥನಾರಾಯಣ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.
PublicNext
14/03/2022 02:19 pm