ಉತ್ತರ ಪ್ರದೇಶ: ಯೋಗಿ ಆದಿತ್ಯನಾಥ್ ನಿಜಕ್ಕೂ ವಿಶೇಷ ಯೋಗಿನೆ. ಕಠೋರ ಹಿಂದುತ್ವದ ರಾಜಕೀಯ ಮೂರ್ತರೂಪದ ರಾಜಕಾರಣಿ ಇವರು. ಇವರ ಮಾತಿನಲ್ಲಿಯೇ ಕಠೋರತೆ ಕಂಡು ಬರುತ್ತದೆ. ಕಾರ್ಯರೂಪದಲ್ಲೂ ಅದು ಈಗಲೂ ಕಾಣ್ತಾನೆ ಇದೆ. ಯೋಗಿ ತೆಗೆದುಕೊಳ್ಳುವ ಅಷ್ಟೂ ನಿರ್ಧಾರಗಳು ಪರಿಣಾಮ ಬೀರಿವೆ. ಬೀರುತ್ತಲೇ ಇವೆ.
ಜೂನ್,5,1972 ರಲ್ಲಿ ಜನಿಸಿದ್ದ ಯೋಗಿ ಪೂರ್ವಾಶ್ರಮದ ಹೆಸರು ಅಜಯ್ ಸಿಂಗ್. ಮುಂದೇ ದೀಕ್ಷೆ ತೆಗೆದುಕೊಂಡು ನಾಥ್ ಪಂಥದ ಧಾರ್ಮಿಕ ಮುಖ್ಯಸ್ಥರಾದರು.ಮಹಾಂತ ಅವಿದ್ಯಾನಾಥರು, ಯೋಗಿ ಆದಿತ್ಯನಾಥರ ಗುರುಗಳು. ಹಿಂದೂ ಧರ್ಮದ ಬಗ್ಗೆ ವಿಶೇಷ ಪ್ರೀತಿ ಹೊಂದಿರೋ ಯೋಗಿ ಆದಿತ್ಯನಾಥ್, 1998 ರಿಂದ ಸತತ ಐದು ಅವಧಿಗೆ ಉತ್ತರ ಪ್ರದೇಶದ ಗೋರಕ್ಪುರ ಕ್ಷೇತ್ರದ ಸಂಸತ ಸದಸ್ಯರಾಗಿದ್ದಾರೆ.
ಈಗ ಎರಡನೇ ಬಾರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಕೂಡ ಆಗುತ್ತಿದ್ದಾರೆ.ಇಂತಹ ಯೋಗಿ ಭಾವುಕ ಜೀವಿ ಕೂಡ ಹೌದು. ಸದನದಲ್ಲಿ ತಮ್ಮ ದುಃಖವನ್ನೂ ತೋಡಿಕೊಂಡಿದ್ದಾರೆ. ಆದರೆ ತಮ್ಮ ಕ್ರಾಂತಿಕಾರಿ ಮಾತು ಮತ್ತು ದಿಟ್ಟ ನಿಲುವಿನಿಂದ ಎಂದು ಹಿಂಜರಿದವರೇ ಅಲ್ಲ. ಯೋಗಿ ಆದಿತ್ಯನಾಥ್ ಅಂದ್ರೆ ಅವರಿಗ ಅವರೇ ಸಾಟಿ.
PublicNext
12/03/2022 03:00 pm