ಪಣಜಿ: ಗೋವಾದಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ ಅನ್ನೊ ಅತೀವ ವಿಶ್ವಾದಲ್ಲಿಯೇ ಇತ್ತು. ಅಧಿಕಾರ ರಚಿಸಲು ಬೇಕಿರೋ 21 ಮ್ಯಾಜಿಕ್ ನಂಬರ್ ಬಗ್ಗೇನೂ ನಂಬಿಕೆ ಇತ್ತು. ಫಲಿತಾಂಶ ಬರೋ ಮುಂಚೇನೆ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೆ ಭೇಟಿಗೆ ಸಮಯವನ್ನೂ ಕೇಳಿತ್ತು. ಆದರೆ ಎಲ್ಲವೂ ಉಲ್ಟಾ ಹೊಡೆದಿದೆ.
ಗೆದ್ದೇ ಗೆಲ್ಲುತ್ತೇವೆ ಎಂದು ಬೀಗುತ್ತಿದ್ದ ಕಾಂಗ್ರೆಸ್ ಪಕ್ಷ ಸೋತು ಹೋಗಿದೆ. ಗೋವಾಕ್ಕೆ ಪಿ.ಚಿದಂಬರಂ ಹಾಗೂ ಡಿಕೆಶಿ ಬಂದು ಅಬ್ಬರದ ಪ್ರಚಾರ ಮಾಡಿದರೂ ಏನೂ ಪ್ರಯೋಜನ ಆಗಿಲ್ಲ. ಗೋವಾದಲ್ಲೂ ಭಾರತೀಯ ಜನತಾ ಪಾರ್ಟಿ ಅಬ್ಬರಿಸಿದೆ.
ಗೋವಾದಲ್ಲಿ ಕೇವಲ 40 ವಿಧಾನಸಭಾ ಕ್ಷೇತ್ರವನ್ನ ಇವೆ. ಅಧಿಕಾರ ರಚಿಸಲು ಬೇಕಿರೋ ಮ್ಯಾಜಿಕ್ ನಂಬರ್ 21 ಅನ್ನೂ ಬಿಜೆಪಿ ದಾಟಿ ಹೋಗಿದೆ. ಈಗ ಅಧಿಕಾರದ ಗದ್ದುಗೆ ಏರಲು ರೆಡಿ ಆಗಿದೆ.
PublicNext
11/03/2022 07:56 am