ಬೆಂಗಳೂರು: ಉಕ್ರೇನ್ ದೇಶದಲ್ಲಿ ರಷ್ಯಾ ದಾಳಿಗೆ ಬಲಿಯಾದ ಹಾವೇರಿಯ ನವೀನ್ ಮೃತ ದೇಹ ಸಿಕ್ಕಿದೆ. ಉಕ್ರೇನ್ ದೇಶದ ಶವಾಗಾರದಲ್ಲಿ ನವೀನ್ ದೇಹ ಇದೆ. ಇದನ್ನ ಭಾರತಕ್ಕೆ ತರುವ ಎಲ್ಲ ಪ್ರಯತ್ನಗಳು ನಡೆಯುತ್ತಿದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ನವೀನ್ ದೇಹವನ್ನ ಭಾರತಕ್ಕೆ ತರುವ ವಿಷಯದಲ್ಲಿ ಈಗಾಗಲೇ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಜೊತೆಗೆ ಮಾತುಕತೆ ಮಾಡಿದ್ದೇವೆ. ರಾಯಭಾರಿ ಕಚೇರಿಯ ಅಧಿಕಾರಿಗಳ ಜೊತೆಗೂ ಸಂಪರ್ಕದಲ್ಲಿದ್ದೇವೆ. ಉಕ್ರೇನ್‌ನಲ್ಲಿ ಇನ್ನೂ ಯುದ್ಧ ನಡೆಯುತ್ತಿದೆ. ನವೀನ್ ಮೃತದೇಹವನ್ನ ಭಾರತಕ್ಕೆ ತರೋ ಸಾಧ್ಯತೆಗಳ ಬಗ್ಗೆ ಚರ್ಚೆಗಳೂ ನಡೆಯುತ್ತಿವೆ ಎಂದು ಬಸವರಾಜ್ ಬೊಮ್ಮಾಯಿ ವಿವರಿಸಿದ್ದಾರೆ.
PublicNext
08/03/2022 11:28 am