ಕಲಬುರಗಿ: ನಾನು ಕಾಂಗ್ರೆಸ್ ಗೆ ಇನ್ನೂ ಡೈವೋರ್ಸ್ ಕೊಟ್ಟಿಲ್ಲ. ಇಲ್ಲಿಯವರೆಗೆ ಆ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಮಾರ್ಚ್12 ರಂದು ನನ್ನ ಮುಂದಿನ ನಡೆ ಏನೂ ಅಂತ ಹೇಳ್ತೀನಿ ಎಂದು ವಿಧಾಣ ಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ಹೇಳಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾರ್ಚ್12 ರಂದು ಮುಂದೆ ಯಾವ ಪಾರ್ಟಿ ಅಂತ ಸೇರುತ್ತೇನೆ ಎಂಬುದನ್ನು ಘೋಷಣೆ ಮಾಡ್ತೀನಿ. ಕಾಂಗ್ರೆಸಲ್ಲಿ IT ರೇಡ್ ಆದೋರಿಗೆ ಬೆಲೆ ಜಾಸ್ತಿ. ನನ್ನ ಬಳಿ ರೊಕ್ಕ ಇಲ್ಲ ರೂಪಾಯಿ ಇಲ್ಲ ಯಾರ್ ಕೇಳತಾರೆ? ಎಂದು ಇಬ್ರಾಹಿಂ ಹೇಳಿದ್ದಾರೆ.
PublicNext
05/03/2022 04:26 pm