ಬೆಂಗಳೂರು: ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕಾಗಿ ಒತ್ತಾಯಿಸಿರುವ ಕಾಂಗ್ರೆಸ್ ಎರಡನೇ ಬಾರಿ ಪಾದಯಾತ್ರೆ ಹಮ್ಮಿಕೊಂಡಿದೆ. ಈ ಪಾದಯಾತ್ರೆ ಇಂದು ಎರಡನೇ ದಿನಮಕ್ಕೆ ಕಾಲಿರಿಸಿದೆ.
ಬಿಡದಿಯಿಂದ ಇಂದು ಬೆಳಗ್ಗೆ ಪಾದಯಾತ್ರೆ ಶುರುವಾಗಲಿದೆ. ಕನಕಪುರ ಮೈದಾನದ ವೇದಿಕೆ ಕಾರ್ಯಕ್ರಮದ ಮೂಲಕ ಆರಂಭವಾಗಿದ್ದ ಪಾದಯಾತ್ರೆಯಲ್ಲಿ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಮಾಜಿ ಸಿಎಂ ಸಿದ್ದರಾಯ್ಯ, ಕೆಪಿಸಿಸಿ ಅದ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಇತರ ನಾಯಕರು ಪಾಲ್ಗೊಂಡಿದ್ದರು. ಇವರೊಂದಿಗೆ ನಟ ನೆನಪಿರಲಿ ಪ್ರೇಮ್, ಸಾಧುಕೋಕಿಲಾ ಕೂಡ ಪಾಲ್ಗೊಂಡು ಪಾದಯಾತ್ರೆಗೆ ತಾರಾ ಮೆರುಗು ನೀಡಿದ್ದರು.
ರಾಮನಗರದಿಂದ ಹೊರಟ ಪಾದಯಾತ್ರೆ ಸದ್ಯ ಬಿಡದಿ ತಲುಪಿದೆ. ಮತ್ತೊಂದೆಡೆ ಬೆಂಗಳೂರಲ್ಲಿ ಕಾಂಗ್ರೆಸ್ ಪಾದಯಾತ್ರೆಗೆ ಸರ್ಕಾರ ಷರತ್ತು ವಿಧಿಸಬಹುದು ಎನ್ನಲಾಗುತ್ತಿದೆ. ಹೀಗಾಗಿ ಕಾಂಗ್ರೆಸ್‌ಗೆ ಈ ಬಾರಿಯೂ ಆತಂಕ ಎದುರಾಗಿದೆ. ಟ್ರಾಫಿಕ್ ಸಮಸ್ಯೆ ತಪ್ಪಿಸಲು ಸರ್ಕಾರವೇ ಬದಲಿ ಮಾರ್ಗ ಸೂಚಿಸಬಹುದು ಎನ್ನಲಾಗ್ತಿದೆ.
PublicNext
28/02/2022 08:44 am