ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಈಶ್ವರಪ್ಪ, ಮುತಾಲಿಕ್ ಇವರೆಲ್ಲ ದೇಶದ ತಾಲಿಬಾನಿಗಳು: ಆರ್. ಧ್ರುವನಾರಾಯಣ್

ಚಾಮರಾಜನಗರ: ಸಚಿವ ಕೆ.ಎಸ್ ಈಶ್ವರಪ್ಪ, ಪ್ರಮೋದ್ ಮುತಾಲಿಕ್ ಇವರೆಲ್ಲ ದೇಶದ ತಾಲಿಬಾನಿಗಳು ಎಂದು ಮಾಜಿ ಸಂಸದ ಕೆಪಿಸಿಸಿ ಕಾರ್ಯಾಧ್ಯಕ್ಷ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಕೂಡಲೇ ಸಚಿವ ಸಂಪುಟದಿಂದ ವಜಾ ಮಾಡಬೇಕು ಹಾಗೂ ಬಂಧಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 326 ದೇಶದ್ರೋಹ ಪ್ರಕರಣ ದಾಖಲಾಗಿದೆ. ಸರ್ಕಾರದ ವಿರುದ್ಧ ಮಾತಾಡಿದರೆ ದೇಶದ್ರೋಹ ಪ್ರಕರಣ ದಾಖಲಿಸುತ್ತಾರೆ. ಬಿಜೆಪಿಯವರು ಸ್ವಯಂ ಘೋಷಿತ ಹುಸಿ ದೇಶ ಭಕ್ತರು. ಕೊಳಚೆ ಬಾಯಲ್ಲಿ ಯಾವಾಗಲೂ ದುರ್ವಾಸನೆ ಬರುತ್ತೆ ಹೊರತು ಸುಗಂಧ ಬರಲ್ಲ. ಎಂದು ಬಿಜೆಪಿಯನ್ನು ಕುಟುಕಿದ ಅವರು, ಈಶ್ವರಪ್ಪ ರಾಜೀನಾಮೆ ನೀಡುವವರೆಗೂ ಕಾಂಗ್ರೆಸ್ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.

Edited By : Nagaraj Tulugeri
PublicNext

PublicNext

18/02/2022 07:22 am

Cinque Terre

51.12 K

Cinque Terre

54

ಸಂಬಂಧಿತ ಸುದ್ದಿ