ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅದ್ಯಾವನೋ ಈಶ್ವರಪ್ಪ ಅಂತೆ, ತಲೆ ಕೆಟ್ಟವನು: ಡಿಕೆಶಿ ಸಿಡಿಮಿಡಿ

ಗದಗ : ಕೆಂಪುಕೋಟೆ ಮೇಲೂ ಕೇಸರಿ ಧ್ವಜ ಹಾರಿಸುತ್ತೇವೆ ಎನ್ನುವ ಸಚಿವ ಕೆ.ಎಸ್‌ ಈಶ್ವರಪ್ಪ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ತಿರುಗೇಟು ನೀಡಿದ್ದು, “ಯಾವನೋ ಈಶ್ವರಪ್ಪ ಅಂತೆ, ತಲೆ ಕೆಟ್ಟ ಈಶ್ವರಪ್ಪ” ಎಂದು ಕಿಡಿಕಾರಿದ್ದಾರೆ.

ಗದಗದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಡಿಕೆಶಿ “ಯಾವನೋ ಈಶ್ವರಪ್ಪ ಅಂತೆ, ತಲೆ ಕೆಟ್ಟ ಈಶ್ವರಪ್ಪ. ಆ ಬೊಮ್ಮಾಯಿ, ಗವರ್ನರ್‌ ಇಟ್ಕೊಂಡು ಕೂತವ್ರೆ. ಕಾಂಗ್ರೆಸ್‌ ಸರಕಾರ ಇದ್ದಿದ್ದರೆ 10 ನಿಮಿಷದಲ್ಲಿ ಅವನ ರಾಜೀನಾಮೆ ಪಡೆಯುತ್ತಿದ್ವಿ” ಎಂದು ಏಕವಚನದಲ್ಲಿಯೇ ಕಿಡಿ ಕಾರಿದ್ದಾರೆ. ಇನ್ನು ಸಿಎಂ ಬಸವರಾಜ ಬೊಮ್ಮಾಯಿ ಒಂದು ಮಾತನ್ನೂ ಆಡುತ್ತಿಲ್ಲ. ಬಾಯಿಗೆ ಹೊಲಿಗೆ ಹಾಕಿಕೊಂಡಿದ್ದಾರಾ? ಸಚಿವ ಈಶ್ವರಪ್ಪ ವಿರುದ್ಧ ದೇಶದ್ರೋಹದ ಕೇಸ್‌ ದಾಖಲಿಸಬೇಕು ಎಂದು ವಾಗ್ದಾಳಿ ನಡೆಸಿದ್ರು. ಇನ್ನು ಇದೇ ವೇಳೆ ಪೊಲೀಸ್‌ ಇಲಾಖೆ ಬಗ್ಗೆಯೂ ಕಿಡಿಕಾರಿದ ಡಿಕೆಶಿ, ಯಾರು ಕೂಡ ಸರ್ಕಾರಿ ನೌಕರರಂತೆ ಕೆಲಸ ಮಾಡ್ತಿಲ್ಲ. ಬಿಜೆಪಿ ಕಾರ್ಯಕರ್ತರಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Edited By : Nagesh Gaonkar
PublicNext

PublicNext

13/02/2022 10:55 pm

Cinque Terre

48.86 K

Cinque Terre

10