ದಾವಣಗೆರೆ: ಶಿಕ್ಷಣದಲ್ಲಿ ಧರ್ಮ ಮತ್ತು ರಾಜಕಾರಣ ನಾವು ಬಯಸಲ್ಲ, ಶಿಕ್ಷಣ ಸಂಸ್ಥೆಯ ಹೊರಗಡೆ ರಾಜಕಾರಣ ಮಾಡೋಣ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಹೊನ್ನಾಳಿ ಪಟ್ಟಣದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, 2013ರಿಂದ 2018ರವರೆಗೆ ಅಧಿಕಾರ ನಡೆಸಿದ ಕಾಂಗ್ರೆಸ್ ಧರ್ಮ ಧರ್ಮಗಳು ಹಾಗೂ ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತಿತ್ತು. ಹಿಂದೂ ಯುವಕರು ಹಾಗೂ ಆರ್ ಎಸ್ ಎಸ್ ನಾಯಕರ ಹತ್ಯೆಯಾಯ್ತು. ಲಿಂಗಾಯತ ಧರ್ಮ ಒಡೆಯಲು ಹೋದ ನಿಮಗೆ ಜನರೇ ತಕ್ಕ ಪಾಠ ಕಲಿಸಿದರು. ಇದೇ ವರ್ತನೆ ಮುಂದುವರಿಸಿದರೆ ಜನರು ಮತ್ತೆ ಅದೇ ಉತ್ತರ ನೀಡುತ್ತಾರೆ ಎಂದು ಹೇಳಿದರು.
ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಹಠ ಬಿಡಬೇಕು. ನಿಮ್ಮ ಮನೆಗಳಲ್ಲಿ ಧರ್ಮ ಪಾಲಿಸಿ, ಆಚರಣೆ ಮಾಡಿ. ಇದಕ್ಕೆ ಯಾರ ವಿರೋಧವೂ ಇಲ್ಲ. ಆದರೆ ಶಾಲಾ ಕಾಲೇಜುಗಳಿಗೆ ಹಿಜಾಬ್ ಧರಿಸಿ ಬರಬೇಡಿ. ವಿನಾಕಾರಣ ಸಂಘರ್ಷಕ್ಕೆ ಎಡೆಮಾಡಿಕೊಡಬೇಡಿ ಎಂದು ಮನವಿ ಮಾಡಿದರು.
PublicNext
13/02/2022 03:15 pm