ನವದೆಹಲಿ: ಪ್ರಧಾನಿ ಮೋದಿ ಆಡಳಿತದಲ್ಲಿ ದೇಶವು ಅಂತರ್ಯುದ್ಧದತ್ತ ಸಾಗುತ್ತಿದೆ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.
ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್ ವಿವಾದದ ಬಗ್ಗೆ ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಅವರು, ಬಿಜೆಪಿ ನಾಯಕರು ಕೇವಲ ಅಯೋಧ್ಯೆ ಮತ್ತು ವಾರಾಣಸಿ ಬಗ್ಗೆ ಮಾತನಾಡುತ್ತಾರೆ. ಆದ್ರೆ ದೇಶದ ಜನರ ಸಮಸ್ಯೆಗಳು , ಹಣದುಬ್ಬರ ಹಾಗೂ ಬಡತನದ ಬಗ್ಗೆ ಮಾತನಾಡುತ್ತಿಲ್ಲ. ಈ ಮೂಲಕ ದೇಶ ಅಂತರ್ಯುದ್ಧದತ್ತ ಸಾಗುತ್ತಿದೆ ಎಂದು ಹೇಳಿದ್ದಾರೆ.
ದೇಶವನ್ನಾಳಿದ ಬ್ರಿಟಿಷರನ್ನು ನಮ್ಮ ಪೂರ್ವಜರು 70 ವರ್ಷಗಳ ಹಿಂದೆ ದೇಶ ಬಿಟ್ಟು ಓಡಿಸಿದರು. ಈಗ ಬ್ರಿಟಿಷರು ಬಿಜೆಪಿಯ ರೂಪದಲ್ಲಿ ವಾಪಸ್ ಬಂದಿದ್ದಾರೆ ಎಂದ ಲಾಲು, ಉತ್ತರ ಪ್ರದೇಶದಲ್ಲಿ ಬಿಜೆಪಿ ಸೋಲಲಿದೆ ಎಂದಿದ್ದಾರೆ.
PublicNext
09/02/2022 05:11 pm