ಹೊಸದಿಲ್ಲಿ : ಲೋಕಸಭೆಯಲ್ಲಿ ಭಾಷಣ ಮಾಡಲಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ತಮ್ಮ ಭಾಷಣದಲ್ಲಿ ಏನಿರಬಹುದೆಂಬ ಸುಳಿವು ನೀಡಲು ಪ್ರಯತ್ನಿಸಿದ್ದಾರೆ.
ಗುರುವಾರ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಭಾಗವಾಗಿ ಮಾತನಾಡುವ ಮುಂಚೆ ತಮ್ಮ ಭಾಷಣಕ್ಕೆ ಸಿದ್ಧರಾಗುವಂತೆ "ಅಡ್ಡಿ ಮಾಡುವ ತಂಡ''ಕ್ಕೆ ಕರೆ ನೀಡಿದ್ದರು.
"ಗುರುವಾರ ಸಂಜೆ ಲೋಕಸಭೆಯಲ್ಲಿ ಮಾತನಾಡುವ ಮುಂಚೆ ಟ್ವೀಟ್ ಮಾಡಿದ ಪಶ್ಚಿಮ ಬಂಗಾಳದ ಕೃಷ್ಣನಗರ ಕ್ಷೇತ್ರದ ಸಂಸದೆ ಮಹುವಾ ಬಿಜೆಪಿಗೆ ತನ್ನ ಅಡ್ಡಿ ಮಾಡುವವರ ತಂಡವನ್ನು ಸಿದ್ಧಪಡಿಸಲು ಹೇಳುತ್ತಿದ್ದೇನೆ. ಕೆಲ ಗೋಮೂತ್ರ ಹನಿಗಳನ್ನೂ ಸೇವಿಸಿ,'' ಎಂದು ವ್ಯಂಗ್ಯವಾಡಿರುವುದು ವಿವಾದಕ್ಕೆ ಕಾರಣವಾಗಿದೆ.
PublicNext
04/02/2022 07:40 am