ನವದೆಹಲಿ : ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ಮಾತನಾಡುವಾಗ, 1947 ರಲ್ಲಿ ಕಾಂಗ್ರೆಸ್ ರಾಜಾಡಳಿತ ವ್ಯವಸ್ಥೆಯನ್ನು ಅಂತ್ಯಗೊಳಿಸಿತ್ತು.
ಈಗ ಅದು ಮರಳಿದೆ ಭಾರತವನ್ನು ಕೇಂದ್ರದ ಕೋಲಿನಿಂದ ಆಳಬಹುದು ಎಂಬ ಕಲ್ಪನೆಯಿದೆ. ಪ್ರತಿ ಬಾರಿಯೂ ಅದು ನಡೆಯುತ್ತಿದೆ ಹಾಗೂ ಕೋಲು ಮುರಿಯುತ್ತಿದೆ' ಎಂದು ಕೇಂದ್ರದ ಧೋರಣೆ ರಾಗಾ ವಿರೋಧಿಸಿದ್ದಾರೆ.
ಕೇಂದ್ರೀಕರಣಕ್ಕೆ ಸಂಬಂಧಿಸಿದಂತೆ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದಿರುವ ರಾಹುಲ್ ಗಾಂಧಿ, ಭಾರತವು ಹಲವು ರಾಜ್ಯಗಳ ಒಕ್ಕೂಟವಾಗಿದೆ ಹಾಗೂ ಇದನ್ನು 'ಅಧಿಪತ್ಯದ' ರೀತಿ ಆಳ್ವಿಕೆ ನಡೆಸಲು ಸಾಧ್ಯವಿಲ್ಲ ಎಂದು ಟೀಕಿಸಿದ್ದಾರೆ.
'ಭಾರತದ ಸಂವಿಧಾನದಲ್ಲಿ ಭಾರತವನ್ನು ರಾಜ್ಯಗಳ ಒಕ್ಕೂಟ ಎಂದು ಹೇಳಲಾಗಿದೆಯೇ ಹೊರತು ರಾಷ್ಟ್ರ ಎಂದು ಅಲ್ಲ. ಭಾರತದಲ್ಲಿ ಒಬ್ಬ ವ್ಯಕ್ತಿ ರಾಜ್ಯಗಳ ಜನತೆಯ ಮೇಲೆ ಆಡಳಿತ ನಡೆಸಲು ಸಾಧ್ಯವಿಲ್ಲ. ಭಿನ್ನ ಭಾಷೆಗಳು ಹಾಗೂ ಸಂಸ್ಕೃತಿಯ ವೈವಿಧ್ಯತೆಯನ್ನು ದಮನಿಸಲು ಸಾಧ್ಯವಿಲ್ಲ. ಇದೊಂದು ಸಹಭಾಗಿತ್ವವೇ ಹೊರತು, ಅಧಿಪತ್ಯ ಅಲ್ಲ' ಎಂದು ಗುಡುಗಿದ್ದಾರೆ.
PublicNext
03/02/2022 10:23 am