ಲಖನೌ(ಉತ್ತರ ಪ್ರದೇಶ): ಪಂಚರಾಜ್ಯ ಚುನಾವಣೆ ಸನಿಹಕ್ಕೆ ಬರುತ್ತಲೇ ಯಾರೂ ನಿರೀಕ್ಷಿಸಿರದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಅದರಲ್ಲೂ ಉತ್ತರ ಪ್ರದೇಶದಲ್ಲಿ ವಿರೋಧಿ ಬಣಗಳಲ್ಲಿ ಗುರುತಿಸಿಕೊಂಡವರು ಪಕ್ಷ ಬಿಟ್ಟು ಎದುರಾಳಿ ಪಕ್ಷ ಸೇರುತ್ತಿದ್ದಾರೆ. ಆ ಪಟ್ಟಿಗೆ ಈಗ ನಿದಾ ಖಾನ್ ಸೇರಿದ್ದಾರೆ.
ಇತ್ತಿಹಾದ್-ಎ-ಮಿತಾತ್ ಮಂಡಳಿಯ ಮುಖ್ಯಸ್ಥ ಮೌಲಾನಾ ತೌಖೀರ್ ರಾಜಾ ಖಾನ್ ಅವರ ಸೊಸೆಯಾದ ನಿದಾ ಖಾನ್ ಬಿಜೆಪಿ ಸೇರುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಇವರು ತ್ರಿವಳಿ ತಲಾಖ್ ಸಂತ್ರಸ್ತೆ ಕೂಡ ಹೌದು. ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಅಪರ್ಣಾ ಯಾದವ್ ಅವರು ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದರು. ಇದರ ಬೆನ್ನಲ್ಲೇ ನಿದಾ ಖಾನ್ ಕೂಡ ಬಿಜೆಪಿ ಸೇರಿದ್ದು, ರಾಜಕೀಯ ಲೆಕ್ಕಾಚಾರ ಏನಿರಬಹುದು? ಎಂಬುದರ ಬಗ್ಗೆ ಕುತೂಹಲ ಹೆಚ್ಚಾಗಿದೆ.
ಇನ್ನು ಬಿಜೆಪಿ ಸೇರ್ಪಡೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ನಿದಾ ಖಾನ್, ಮುಸ್ಲಿಂ ಮಹಿಳೆಯರ ಸಬಲೀಕರಣಕ್ಕಾಗಿ ಬಿಜೆಪಿ ದುಡಿಯುತ್ತಿದೆ. ನನ್ನ ಮಾವ ಕಾಂಗ್ರೆಸ್ ಸೇರಿರಬಹುದು. ಆದರೆ ನಾನು ಮೊದಲಿನಿಂದಲೂ ಬಿಜೆಪಿ ಬೆಂಬಲಿಗಳಾಗಿದ್ದೇನೆ. ಮೈ ಲಡ್ಕಿ ಹೂಂ, ಲಡ್ ಸಕ್ತಿ ಹೂಂ (ನಾನು ಹುಡುಗಿ, ನಾನು ಹೋರಾಡಬಲ್ಲೆ) ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದು ಕೇವಲ ಮಾತಿನಲ್ಲಷ್ಟೇ ಇದೆ. ಆದರೆ ಆ ಮಾತನ್ನು ಬಿಜೆಪಿಯಲ್ಲಿ ಮಾತ್ರ ಸಾಕಾರಗೊಳಿಸಲು ಸಾಧ್ಯ ಎಂದು ನಿದಾ ಖಾನ್ ಹೇಳಿದ್ದಾರೆ.
PublicNext
31/01/2022 02:35 pm