ಶಿವಮೊಗ್ಗ: ಸಚಿವ ಸಂಪುಟ ವಿಸ್ತರಣೆ ವಿಚಾರ ಚರ್ಚೆಯಾಗುತ್ತಿದೆ. 4 ಸ್ಥಾನಗಳು ಖಾಲಿ ಇವೆ.ಹೀಗಾಗಿ, ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ, ಯಾವುದೇ ರಾಜಕಾರಣಿ ಮಂತ್ರಿಯಾಗುವ ಆಸೆ ಇಟ್ಟುಕೊಳ್ಳುವುದು ತಪ್ಪಲ್ಲ.
ರಾಜ್ಯದ ಅಧ್ಯಕ್ಷ ಸ್ಥಾನ ಖಾಲಿ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ನಾನು ಹಿಂದಿನಿಂದಲೂ ಪಕ್ಷ ಏನು ಹೇಳುತ್ತೋ ಅದನ್ನು ಮಾಡುತ್ತೇನೆ. ಪಕ್ಷ ಏನು ಜವಬ್ದಾರಿ ಕೊಡುತ್ತೋ ಅದನ್ನು ಮಾಡುತ್ತೇನೆ. ಪಕ್ಷದ ಸಂಘಟನೆ ಸ್ಥಾನ ಸಂತೋಷದಿಂದ ಒಪ್ಪಿಕೊಳ್ಳುತ್ತೇನೆ. ಮಂತ್ರಿ ಸ್ಥಾನಕ್ಕಿಂತಲೂ ನನಗೆ ಈ ಸ್ಥಾನ ಬಹಳ ಖುಷಿ ಕೊಡುತ್ತೆ. ಬೊಮ್ಮಾಯಿಯವರು ಒಳ್ಳೆ ಕೆಲಸ ಮಾಡುತ್ತಿದ್ದಾರೆ ಎಂದರು.
PublicNext
24/01/2022 12:44 pm