ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಎಂ ಆಗೋದು ಬಿಡೋದು ನನ್ನ ಕೈಯಲ್ಲಿಲ್ಲ: ಸಚಿವ ನಿರಾಣಿ

ಬೆಂಗಳೂರು: ಸೂರ್ಯ ಚಂದ್ರ ಇರೋವರೆಗೂ ನಿರಾಣಿ ಸಿಎಂ ಆಗುವುದಿಲ್ಲ ಎಂಬ ಯತ್ನಾಳ್ ಹೇಳಿಕೆಗೆ ಸಚಿವ ಮುರುಗೇಶ್ ನಿರಾಣಿ ಕಿಡಿಕಾರಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ತುಂಬ ದೊಡ್ಡವರು. ದೊಡ್ಡವರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಸಿಎಂ ಆಗುವುದು ಬಿಡುವುದು ನನ್ನ ಕೈಯಲ್ಲಿ ಇಲ್ಲ ಎಂದು ಹೇಳಿದರು. ಸಿಎಂ ಆಗೋದಕ್ಕೆ ನಿರಾಣಿ ಸೂಟ್ ಹೊಲಿಸಿಕೊಂಡಿದ್ದಾರೆಂಬ ಯತ್ನಾಳ್ ರ ಮತ್ತೊಂದು ಆರೋಪಕ್ಕೆ ಪ್ರತಿಕ್ರಿಯಿಸಿ, ಹೌದು, ನಾನು ಸೂಟ್ ಹೊಲಿಸಿ ಕೊಂಡಿದ್ದೇನೆ, ಸೂಟ್ ಇಲ್ಲದಿದ್ದರೆ ನಿತ್ಯ ಹೇಗೆ ಓಡಾಡಲಿ ನಾನು ಎಂದು ಯತ್ನಾಳ್‌ಗೆ ನಿರಾಣಿ ತಿರುಗೇಟು ನೀಡಿದ್ದಾರೆ

Edited By : Nagaraj Tulugeri
PublicNext

PublicNext

22/01/2022 07:50 am

Cinque Terre

33.33 K

Cinque Terre

1