ಬೆಳಗಾವಿ: ಬೂದಿ ಮುಚ್ಚಿದ ಕೆಂಡದಂತಿರುವ ಬೆಳಗಾವಿ ಗಡಿಯಲ್ಲಿ ಮತ್ತೇ ಶಾಂತಿ ಕದಡಲು ಶಿವಸೇನೆ ಹುನ್ನಾರ ಮಾಡಿದೆ. ಕೊಲ್ಲಾಪುರ ಶಿವಸೇನೆ ಮೇಲಿನ ದೇಶದ್ರೋಹ ಕೇಸ್ ವಾಪಸ್ ಗೆ ಆಗ್ರಹಿಸಿ ನಾಳೆ ಬೆಳಗಾವಿಗೆ ನುಗ್ತೀವಿ ಎಂದು ಅವಾಝ್ ಹಾಕಿದ್ದಾರೆ.
ನಾಳೆ ಕೊಲ್ಲಾಪುರದಿಂದ ಬೆಳಗಾವಿಗೆ ಶಿವಸೇನೆ ದಿಂಡಿ ಮಾರ್ಚ್ ಗೆ ನಿರ್ಧಾರ ಮಾಡಲಾಗಿದ್ದು, ಪಲ್ಲಕ್ಕಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಇರಿಸಿ ಮೆರವಣಿಗೆಗೆ ನಿರ್ಧಾರ ಮಾಡಿರುವುದಾಗಿ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲಾಧ್ಯಕ್ಷ ವಿಜಯ ದೇವಣೆ ಹೇಳಿಕೆ ನೀಡಿದ್ದಾರೆ.
ಕರ್ನಾಟಕ ಮಹಾರಾಷ್ಟ್ರ ಗಡಿಯಾದ ಕಾಗಲ್ ಬಳಿ ಶಿವಾಜಿ ಮೂರ್ತಿಗೆ ಅಭಿಷೇಕ ಮಾಡಿ ಆ ಬಳಿಕ ಬೆಳಗಾವಿ ಗೆ ಪಲ್ಲಕ್ಕಿಯೊಂದಿಗೆ ನುಗ್ತೀವಿ ಎಂದ ಶಿವಸೇನೆ ಪುಂಡರು, ಕರ್ನಾಟಕದ ಪೊಲೀಸರು ನಮ್ಮ ಹೋರಾಟ ಹತ್ತಿಕ್ಕಲು ಯತ್ನಿಸಿದ್ರು ನಾವು ಹಿಂದೆ ಸರಿಯಲ್ಲ.ಶಿವಸೇನೆಯ ಸಾವಿರಾರು ಕಾರ್ಯಕರ್ತರೊಂದಿಗೆ ಕರ್ನಾಟಕ ನುಗ್ತೀವಿ ಎಂದು ಶಿವಸೇನೆ ಧಮ್ಕಿ ಹಾಕಿದೆ.
PublicNext
21/01/2022 03:47 pm