ದಾವಣೆಗೆರೆ: ಮಕ್ಕಳು ಅತ್ತಾಗ ಜಾತ್ರೆಯಲ್ಲಿ ಪೋಷಕರು ಕಾರ್ ಕೊಡಿಸುತ್ತಾರೆ. ಅದೇ ರೀತಿಯಲ್ಲಿ ನನಗೂ ಕಾರ್ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಕ್ಷೇತ್ರದಲ್ಲಿ ಏನೇನೂ ಕೆಲಸ ಮಾಡಲಾಗುತ್ತಿಲ್ಲ ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಯಡಿಯೂರಪ್ಪ ಅವರು ಸೂಚಿಸಿದಂತೆ ನಾನು ಸೇರಿ ಹಲವು ಶಾಸಕರು ಪಕ್ಷದಲ್ಲಿ ಹಮಾಲಿ ಕೆಲಸ ಮಾಡಿದ್ದೇವೆ. ಈಗ ಸಚಿವರಾಗಿರುವವರೇ ಕಳೆದ ಮೂರು ಅವಧಿಯಲ್ಲಿ ಸಚಿವರಾಗಿದ್ದರು. ಪ್ರತಿ ಬಾರಿ ಅವರೇ ಸಚಿವರಾಗೋದಕ್ಕೆ ನೋವಿದೆ. ಗುಜರಾತ್ ಮಾದರಿಯಲ್ಲಿ ಸಚಿವ ಸಂಪುಟ ರಚೆನಯಾಗಬೇಕು. ರಾಜ್ಯಧ್ಯಕ್ಷರಿಗೆ, ಸಿಎಂಗೆ, ಬಿಎಸ್‌ವೈಗೆ, ರಾಷ್ಟ್ರೀಯ ನಾಯಕರಿಗೆ ಈ ಬಗ್ಗೆ ಮನವರಿಕೆ ಮಾಡ್ತೀವಿ. ಅವರನ್ನ ಸಚಿವ ಸಂಪುಟದಿಂದ ಕೈಬಿಡಬೇಕು. ಅವರೆಲ್ಲ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು. ಹೊಸ ಮುಖಗಳಿಗೆ ಸಂಪುಟದಲ್ಲಿ ಅವಕಾಶ ಕೊಡಬೇಕು. ನಾನು ನನ್ನ ಭಾವನೆಗಳನ್ನ ಹಾಗೂ ಕೆಲವು ಶಾಸಕರ ಭಾವನೆಗಳನ್ನ ಶಾಸಕಾಂಗ ಸಭೆಯಲ್ಲಿ ವ್ಯಕ್ತಪಡಿಸಿದ್ದೇನೆ. ಸದ್ಯ ನೀಡಲಾಗಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನನ್ನ ಕ್ಷೇತ್ರದಲ್ಲಿ ಏನೇನೂ ಕೆಲಸ ಮಾಡಲಾಗುತ್ತಿಲ್ಲ ಎಂದ ರೇಣುಕಾಚಾರ್ಯ ಅಸಮಾಧಾನ ಹೊರಹಾಕಿದ್ದಾರೆ.
PublicNext
15/01/2022 07:17 pm