ಬೆಂಗಳೂರು : ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಆರಂಭಿಸಿರುವ ಪಾದಯಾತ್ರೆ ನಾಲ್ಕನೇ ದಿನಕ್ಕೆ ಕಾಲಿಡುತ್ತಿದ್ದಂತೆಯೆ ಕೊರೊನಾ ಸೊಂಕು ಕಾಣಿಸಿಕೊಂಡು ಒಬ್ಬೊಬ್ಬರಾಗಿ ಮನೆ ಸೇರಿ ಐಸೋಲೇಶನ್ ಆಗುತ್ತಿದ್ದಾರೆ.
ಸರಕಾರ ಹಾಗೂ ವೈದ್ಯರ ಸಲಹೆಗೆ ಕ್ಯಾರೆ ಎನ್ನದೆ ಪಾದಯಾತ್ರೆ ಹೊರಟಿರುವ ನಾಯಕರು ಹಾಗೂ ಸಹಸ್ರಾರು ಕಾರ್ಯಕರ್ತರ ಪರಿಸ್ಥಿತಿ ಏನಾಗುವುದೋ ದೇವರೆ ಬಲ್ಲ. ನಿನ್ನೆ ಗೌರಿಬಿದನೂರಿನ ಕಾಂಗ್ರೆಸ್ ಶಾಸಕ ಎನ್.ಎಚ್ ಶಿವಶಂಕರರೆಡ್ಡಿ ಹಾಗೂ ಮಾಜಿ ಶಾಸಕಿ ಹಾಗೂ ಕಾಂಗ್ರೆಸ್ ಹಿರಿಯ ನಾಯಕಿ ಮಲ್ಲಾಜಮ್ಮ ಅವರಿಗೆ ಕೊರೊನಾ ದೃಢಪಟ್ಟಿದೆ.
ಪಾದಯಾತ್ರೆಯಲ್ಲಿದ್ದ ಕಾಂಗ್ರೆಸ್ ಶಾಸಕ ಎನ್.ಎಚ್ ಶಿವಶಂಕರರೆಡ್ಡಿ ಕೊರೊನಾ ಲಕ್ಷಣ ಕಾಣಿಸಿಕೊಳ್ಳುತ್ತಲೆ ಗೌರಿದಿನೂರಿಗೆ ವಾಪಸ್ಸಾಗಿದ್ದರು. ಅದೇ ರೀತಿ ಮಲ್ಲಾಜಮ್ಮ ಅವರಿಗೂ ಕೊರೊನಾ ದೃಢಪಟ್ಟ ನಂತರ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಬೊಪ್ಪಸಮುದ್ರದ ತಮ್ಮ ಮನೆಗೆ ತೆರಳಿ ಐಸೋಲೇಶನ್ ಆಗಿದ್ದಾರೆ.
ಇಷ್ಟೇ ಅಲ್ಲ ತಮ್ಮ ಸಂಪರ್ಕಕ್ಕೆ ಬಂದಿರುವವರೆಲ್ಲರೂ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ಈ ಇಬ್ಬರೂ ನಾಯಕರು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ..
PublicNext
12/01/2022 03:27 pm