ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂರು ರಾಜ್ಯಗಳಲ್ಲಿ ಮತ್ತೆ ಅರಳುತ್ತಾ ಕಮಲ?: ಏನು ಹೇಳುತ್ತೆ ಸಮೀಕ್ಷೆ?

ಹೊಸದಿಲ್ಲಿ: ಗೋವಾ ಉತ್ತರಪ್ರದೇಶ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿ ಬಿಜೆಪಿ ಪಾಳಯಕ್ಕೆ ಮತ್ತೊಮ್ಮೆ ವಿಜಯ ಒಲಿಯಲಿದೆ. ಪಂಜಾಬ್‌ನಲ್ಲಿ ಬಿಜೆಪಿ ಗೆಲುವಿನ ಸನಿಹಕ್ಕೆ ಬರಲಿದ್ದು ಆಮ್ ಆದ್ಮಿ ಪಕ್ಷಕ್ಕೆ ಬಹುಮತ ಸಿಗುವ ಸಾಧ್ಯತೆ ಇದೆ. ಈ ಮೂಲಕ ಕಾಂಗ್ರೆಸ್‌ ಸೋಲು ಕಾಣಲಿದೆ ಎಂದು ಟೈಮ್ಸ್‌ ನೌ ನಡೆಸಿದ ಚುನಾವಣಾ ಪೂರ್ವ ಸಮೀಕ್ಷಾ ವರದಿ ಈ ಭವಿಷ್ಯ ನುಡಿದಿದೆ.

ಪಂಚರಾಜ್ಯಗಳಲ್ಲಿ ಚುನಾವಣೆಯ ಕಾವು ಏರುತ್ತಿರುವಂತೆಯೇ, ಜನಮತ ಸಂಗ್ರಹ ಮಾಡಲಾಗಿದ್ದು, ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ನೇತೃತ್ವದ ಸರಕಾರಕ್ಕೆ ಬಹುಮತ ಖಚಿತ ಎಂದು ಹೇಳಲಾಗಿದೆ. 403 ಕ್ಷೇತ್ರಗಳ ಪೈಕಿ 227-254 ಸೀಟ್‌ಗಳನ್ನು ಪಡೆಯುವ ಮೂಲಕ ಬಿಜೆಪಿ ಮತ್ತೆ ಅಧಿಕಾರಕ್ಕೇರಲಿದೆ. ಕಳೆದ ಚುನಾವಣೆಗಿಂತ ಈ ಬಾರಿ ಕಡಿಮೆ ಸೀಟುಗಳು ಬರಲಿದ್ದು, ಎಸ್ಪಿಗೆ 136-151 ಸೀಟುಗಳು ಲಭ್ಯವಾಗಲಿದೆ. ರಾಮಮಂದಿರ ಮತ್ತು ಕಾಶಿ ವಿಶ್ವನಾಥ ಕಾರಿಡಾರ್‌ ಯೋಜನೆಯು ಕಮಲ ಪಕ್ಷಕ್ಕೆ ಹೆಚ್ಚಿನ ಲಾಭ ತಂದುಕೊಡಲಿದೆ ಎಂದು ಸಮೀಕ್ಷೆ ಹೇಳಿದೆ.

ಪಂಜಾಬ್‌ನಲ್ಲಿ 41-47 ಸೀಟು ಗಳಿಸುವ ಮೂಲಕ ಮತ್ತೂಂದು ರಾಜ್ಯವು ಆಮ್‌ ಆದ್ಮಿ ಪಕ್ಷದ ತೆಕ್ಕೆಗೆ ಬೀಳಲಿದೆ. ಉತ್ತರಾಖಂಡದಲ್ಲಿ ಹಾಲಿ ಸಿಎಂ ಪುಷ್ಕರ್‌ ಸಿಂಗ್‌ ಧಮಿ ಬಗ್ಗೆ ಜನರ ಒಲವಿದ್ದು, 44-50 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ಸಮೀಕ್ಷೆ ತಿಳಿಸಿದೆ.

Edited By : Nagaraj Tulugeri
PublicNext

PublicNext

11/01/2022 10:31 pm

Cinque Terre

102.36 K

Cinque Terre

16

ಸಂಬಂಧಿತ ಸುದ್ದಿ