ರಾಮನಗರ: ನಾವು ಗಂಡಸರು ಆಗಿದ್ದೇವೆ.ನಾವು ನಮ್ಮ ಗಂಡಸ್ತನವನ್ನ ಕೆಲಸದಲ್ಲಿ ತೋರಿಸುತ್ತೇವೆ. ಹೀಗೆ ಖಡಕ್ ಆಗಿಯೇ ಕಾಂಗ್ರೆಸ್ ನಡೆಯನ್ನ ಸಚಿವ ಅಶ್ವತ್ಥ ನಾರಾಯಣ ಇಂದು ರಾಮನಗರದಲ್ಲಿ ಟೀಕಿಸಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಯಾವತ್ತೂ ಮೇಕೆದಾಟು ಯೋಜನೆ ಅನುಷ್ಠಾನ ಮಾಡಲು ಆಗೋದೇ ಇಲ್ಲ. ಅದನ್ನ ನಾವು ಮಾಡಿ ತೋರಿಸುತ್ತೇವೆ ಇದು ನನ್ನ ಸವಾಲ್ ಎಂದು ಸಚಿವ ಅಶ್ವತ್ಥ ನಾರಾಯಣ ಖಡಕ್ ಸವಾಲನ್ನೆ ಕಾಂಗ್ರೆಸ್ ಪಕ್ಷಕ್ಕೆ ಹಾಕಿದ್ದಾರೆ.
ಕಾಂಗ್ರೆಸ್ ಪಕ್ಷ ರಾಜಕಾರಣ ಬಿಟ್ಟು ಅಭಿವೃದ್ಧಿ ಬಗ್ಗೆ ಮೊದಲು ಚಿಂತಿಸಲಿ. ಡಿಕೆ ಶಿವಕುಮಾರ್ ಅವ್ರು ಅಧಿಕಾರಕ್ಕೋಸ್ಕರವೇ ಸುಳ್ಳು ಮೋಸ ಮಾಡಿಕೊಂಡು ಬಂದಿದ್ದಾರೆ ಅಂತಲೇ ಅಶ್ವತ್ಥ ನಾರಾಯಣ ಆರೋಪಿಸಿದ್ದಾರೆ.
ಕಾಂಗ್ರೆಸ್‌ಗೆ ಮೇಕೆದಾಟು ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲವೇ ಇಲ್ಲ. ಕೋರ್ಟ್ ನಲ್ಲಿ ಈ ವಿಚಾರ ಇದೆ. ಈಗಲೂ ಪಾಲಿಟಿಕ್ಸ್ ಮಾಡಿದ್ದಾರೆ. ಇದು ಸರಿ ಅಲ್ಲವೇ ಅಲ್ಲ ಅಂತಲೇ ಚುಚ್ಚಿದ್ದಾರೆ ಅಶ್ವತ್ಥ ನಾರಾಯಣ.
PublicNext
11/01/2022 03:41 pm