ಬೆಂಗಳೂರು: ರಾಮನಗರದಲ್ಲಿ ಸಚಿವ ಅಶ್ವತ್ಥ್ ನಾರಾಯಣ್ ಹಾಕಿದ್ದ ಸವಾಲಿಗೆ ಸಂಸದ ಡಿ.ಕೆ.ಸುರೇಶ್ ಗಂಡಸ್ತನದ ಪ್ರತಿ ಸವಾಲೆಸೆದಿದ್ದಾರೆ.
ಮೇಕೆದಾಟು ಪಾದಯಾತ್ರೆ 2 ದಿನ ಪೂರೈಸಿ ಮೂರನೇ ದಿನಕ್ಕೆ ಕಾಲಿಟ್ಟಿದೆ. ಇವತ್ತು ಬೆಳಗ್ಗೆ 9.30ಕ್ಕೆ ಕನಕಪುರದಿಂದ ಯಾತ್ರೆ ಮತ್ತೆ ಆರಂಭವಾಗಲಿದೆ. ನಿನ್ನೆ ಯಾತ್ರೆಯ ಕೊನೆಯಲ್ಲಿ ಬಿಜೆಪಿ ನಾಯಕರಿಗೆ ಸಂಸದ ಡಿ.ಕೆ.ಸುರೇಶ್ ತಾಕತ್ತು, ಗಂಡಸ್ತನದ ಸವಾಲು ಹಾಕಿದ್ದಾರೆ.
ಕನಕಪುರಲ್ಲಿ ಮಾತನಾಡಿದ ಸಂಸದ ಡಿ.ಕೆ.ಸುರೇಶ್, 'ಗಂಡಸ್ತನದ ಪ್ರಶ್ನೆಯನ್ನ ವೇದಿಕೆ ಮೇಲೆ ಮಾಡೋದಲ್ಲ. ಮೇಕೆದಾಟು ಯೋಜನೆ ಅನುಷ್ಠಾನ ಮಾಡಿ ನೀವು ಗಂಡಸರು ಅಂತ ತೋರಿಸಿ. ನಿಮಗೆ ಗಂಡಸ್ತನ ಇದ್ದರೆ ಪ್ರಧಾನಿ ಮೋದಿ ಬಳಿ ಹೋಗಿ ಮೇಕೆದಾಟು ಯೋಜನೆಗೆ ಒಪ್ಪಿಗೆ ತನ್ನಿ. ನಿಮ್ಮ ಪಾದಪೂಜೆಯನ್ನ ನಾನು ಮಾಡುತ್ತೇನೆ' ಎಂದು ಹೇಳಿದರು.
PublicNext
11/01/2022 10:19 am