ನವದೆಹಲಿ: ಪಂಜಾಬ್‌ನ ಹುಸೈನಿವಾಲಾ ಮಾರ್ಗದಲ್ಲಿರುವ ಫ್ಲೈಓವರ್ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ತೆರಳುತ್ತಿದ್ದಾಗ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದ ಘಟನೆ ಬಗ್ಗೆ ಭಾರೀ ವಿರೋಧ ವ್ಯಕ್ತವಾಗಿದೆ. ಬಿಜೆಪಿ ನಾಯಕರು ಕಾಂಗ್ರೆಸ್ ನೇತೃತ್ವದ ಪಂಜಾಬ್ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಪ್ರಧಾನಿ ಮೋದಿ ಅವರು ರಸ್ತೆ ಮಾರ್ಗದ ಮೂಲಕ ತೆರಳುತ್ತಿರುವ ಕುರಿತು ಮಾಹಿತಿ ನೀಡಿದ್ದರೂ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಭದ್ರತೆ ಒದಗಿಸುವ ಕುರಿತು ಭರವಸೆ ನೀಡಿದ್ದರೂ ಸಮರ್ಪಕ ಭದ್ರತೆ ಒದಗಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದೇ ವಿಶ್ಲೇಷಿಸಲಾಗಿದೆ. ಹೀಗಿದ್ದರೂ ಕಾಂಗ್ರೆಸ್ ಈ ಎಲ್ಲ ಆರೋಪಗಳನ್ನು ತಳ್ಳಿ ಹಾಕಿದೆ.
ಈ ಬಗ್ಗೆ ವಿಡಿಯೋ ಟ್ವೀಟ್ ಮಾಡಿರುವ ಇಂಡಿಯನ್ ಯೂತ್ ಕಾಂಗ್ರೆಸ್, 'ಪ್ರಚಾರ ಸಭೆಗೆ 7,000 ಖುರ್ಚಿ ಹಾಕಿಸಿ, 700 ಜನರು ಕೂಡ ಬರದೆ ಇದ್ದಾಗ ವಾಪಸ್ ಹೋಗಲು ನಾಚಿಕೆಯಾಗಿ ತಮ್ಮ ಪಕ್ಷದವರಿಂದಲೆ ರಸ್ತೆ ತಡೆ ಮಾಡಿಸಿ ಮೋದಿಯವರು ವಾಪಸ್ ಹೋದರೆ?' ಎಂದು ಬರೆದುಕೊಂಡಿದೆ.
PublicNext
07/01/2022 03:09 pm