ಬೆಂಗಳೂರು: ಅವರು ಏನೇನೋ ಹುಚ್ಚುಚ್ಚಾಗಿ ಮಾತನಾಡಿದ್ರೆ ನಾನೇನೂ ಮಾಡೋಕಾಗಲ್ಲ. ಅವರ ಹೇಳಿಕೆಗೆ ನನ್ನ ಸಂತೋಷ ಎಂದು ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದ್ದಾರೆ.
ಸಂಸದ ಜಿ.ಎಸ್ ಬಸವರಾಜ್ ಹಾಗೂ ಸಚಿವ ಬೈರತಿ ಬಸವರಾಜ್ ನಡುವಿನ ಗುಸುಗುಸು ಮಾತುಕತೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಮಾಧುಸ್ವಾಮಿ ನಾನಿದ್ದರೆ ಜಿಲ್ಲೆಯಲ್ಲಿ ಬಿಜೆಪಿಯಿಂದ ಒಂದು ಸೀಟ್ ಕೂಡ ಗೆಲ್ಲೋಕಾಗಲ್ಲ ಎಂದಿದ್ದಾರೆ. ಹಾಗಾದ್ರೆ ನನ್ನನ್ನು ತೆಗೆದು ಹಾಕಿ ಅವರೇ ಇರಲಿ ಎಂದು ಟಾಂಗ್ ನೀಡಿದ್ದಾರೆ.
ನಾನು ಕೂಡ ಆ ಸುದ್ದಿಗೋಷ್ಠಿಗೆ ಹೋಗಿದ್ದೆ. ಆದರೆ 12 ಗಂಟೆಗೆ ಕ್ಯಾಬಿನೆಟ್ ಇರುವುದರಿಂದ ಸಮಯವಾಗುತ್ತದೆ. 9.30ಗೆ ಹೊರಡಬೇಕು ಎಂದು ಮೊದಲೇ ಹೇಳಿದ್ದೆ. ಆದರೂ ಕಾರ್ಯಕ್ರಮದ ನಿರ್ವಾಹಕರು 10 ಗಂಟೆಯಾದರೂ ಸಭೆ ಮುಗಿಸಲಿಲ್ಲ. ಇದರಿಂದಾಗಿ ನಾನು ಅಲ್ಲಿಂದ ಎದ್ದು ಬಂದಿದ್ದೇನೆ. ನನಗೆ ಬೇರೆಯವರ ವಿಚಾರ ತಿಳಿದಿಲ್ಲ ಎಂದು ಮಾಧುಸ್ವಾಮಿ ಹೇಳಿದ್ದಾರೆ.
PublicNext
06/01/2022 02:40 pm