ಬೆಂಗಳೂರು:ನಾವು ಪಾದಯಾತ್ರೆ ಮಾಡುತ್ತೇವೆ. ಏನೇ ಟಫ್ ರೂಲ್ಸ್ ಬಂದ್ರು ಸರಿಯೇ. ಪಾದಯಾತ್ರೆ ಮಾಡೋದನ್ನ ಬಿಡೋದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಖಡಕ್ ಆಗಿಯೇ ಹೇಳಿದ್ದಾರೆ.
144ನೇ ಕಲಂ ಜಾರಿಯಲ್ಲಿದೆ. ನಾಲ್ಕು ಜನಕ್ಕಿಂತ ಹೆಚ್ಚು ಜನ ಸೇರೋ ಆಗಿಲ್ಲ. ಅದಕ್ಕೇನೆ ಮಾಡ್ತೀರಿ. ಇದಕ್ಕೂ ಉತ್ತರ ಕೊಟ್ಟಿದ್ದಾರೆ ಸಿದ್ದರಾಮಯ್ಯ.ನಾವು ನಾಲ್ಕೇ ಜನ ಪಾದಯಾತ್ರೆ ಮಾಡುತ್ತೇವೆ. ಜನರಿಗೆ ಬರಲು ಹೇಳಿದ್ದೇವೆ. ಹಾಗೆ ಬಂದೋರಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್ ಅನ್ನೂ ಕೊಡುತ್ತೇವೆ ಎಂದೇ ಸಿದ್ದರಾಮಯ್ಯ ವಿವರಿಸಿದ್ದಾರೆ.
PublicNext
05/01/2022 08:42 pm