ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಿಕೆ ಸುರೇಶ್ ಪ್ರತಿಕೃತಿದಹಿಸಿ ಯಾದಗಿರಿಯಲ್ಲಿ ಬಿಜೆಪಿ ಪ್ರತಿಭಟನೆ..!

ವರದಿ: ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ

ಯಾದಗಿರಿ: ನಿನ್ನೆ ರಾಮನಗರ ಜಿಲ್ಲೆಯಲ್ಲಿ ನಡೆದ ಸಿಎಂ ಕಾರ್ಯಕ್ರಮವೊಂದರಲ್ಲಿ ಸಚಿವ ಡಾ. ಸಿಎನ್‌ ಅಶ್ವತ್ಥ ನಾರಾಯಣ ಹಾಗೂ ಸಂಸದ ಡಿ.ಕೆ ಸುರೇಶ್ ವೇದಿಕೆಯಲ್ಲೇ ಕೈ ಕೈ ಮಿಲಾಯಿಸಿದ ಘಟನೆ ಖಂಡಿಸಿ, ಇಂದು ಯಾದಗಿರಿ ಜಿಲ್ಲಾ ಬಿಜೆಪಿ ವತಿಯಿಂದ ಪ್ರತಿಭಟನೆ ಮಾಡಲಾಯಿತು.

ಯಾದಗಿರಿ ನಗರದ ಸುಭಾಷ್ ವೃತ್ತದಲ್ಲಿ ಸಂಸದ ಡಿ.ಕೆ.ಸುರೇಶ್ ಪ್ರತಿಕೃತಿದಹಿಸಿ ಪ್ರತಿಭಟಿಸಿದ ಬಿಜೆಪಿ ಕಾರ್ಯಕರ್ತರು ಡಿ.ಕೆ.ಬ್ರದರ್ಸ್ ಗೂಂಡಾಗಳು, ಕೋತ್ವಾಲ್ ಶಿಷ್ಯಂದಿರು ಅಂತ ಘೋಷಣೆ ಕೂಗಿದರು.

ಅಲ್ಲದೇ ರೌಡಿ ಡಿ.ಕೆ.ಸುರೇಶ್ ಗೆ ಧಿಕ್ಕಾರ ಎಂದು ಕೂಗೋದರ ಜತೆಗೆ ಡಿ.ಕೆ.ಸುರೇಶ್ ಪೊಟೋ ಗೆ ಚಪ್ಪಲಿಯಿಂದ ಹೊಡೆದು ಆಕ್ರೋಶ ಹೊರಹಾಕಿದರು.

ಪ್ರತಿಭಟನೆಯಲ್ಲಿ ಜಿಲ್ಲೆಯ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಭಾಗಿಯಾಗಿದ್ದರು.

Edited By : Nagesh Gaonkar
PublicNext

PublicNext

04/01/2022 02:52 pm

Cinque Terre

44.38 K

Cinque Terre

0

ಸಂಬಂಧಿತ ಸುದ್ದಿ