ಬೆಂಗಳೂರು: ಎಂಇಎಸ್ ನಿಷೇಧಿಸುವಂತೆ ಕನ್ನಡ ಸಂಘಟನೆಗಳು ನಾಳೆ ಕರ್ನಾಟಕ ಬಂದ್ ಗೆ ಕರೆ ನೀಡಿದ್ದವು. ಆದರೆ ಇಂದು ನಡೆದ ಸಿಎಂ ಸಭೆಯಲ್ಲಿ ಕನ್ನಡ ಸಂಘಟನೆಗಳು ಕರ್ನಾಟಕ ಬಂದ್ ವಾಪಾಸ್ ಪಡೆದಿವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಬಂದ್ ಕರೆ ಹಿನ್ನೆಲೆಯಲ್ಲಿಯೇ ಇಂದು ಬಸವರಾಜ್ ಬೊಮ್ಮಾಯಿ ಕನ್ನಡ ಸಂಘಟನೆಗಳ ಜೊತೆಗೆ ಸಭೆ ನಡೆಸಿದ್ದರು. ಈ ಸಂಧಾನ ಸಭೆ ಸಕ್ಸಸ್ ಆಗಿದೆ. ನಾಳೆ ಬಂದ್ ಇರೋದಿಲ್ಲ. ಕನ್ನಡ ಸಂಘಟನೆಗಳು ಬಂದ್ ಕರೆ ವಾಪಾಸ್ ಪಡೆದಿವೆ ಅಂತಲೇ ಸಭೆ ಬಳಿಕ ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
PublicNext
30/12/2021 06:51 pm