ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದು ಉ.ಪ್ರದೇಶಕ್ಕೆ ಪ್ರಧಾನಿ ಭೇಟಿ : ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ

ಉತ್ತರ ಪ್ರದೇಶ : ಇಂದು ಪ್ರಧಾನಿ ಮೋದಿ ಉತ್ತರ ಪ್ರದೇಶದ ಕಾನ್ಪುರಕ್ಕೆ ಭೇಟಿ ನೀಡಲಿದ್ದು, ಕಾನ್ಪುರ ಮೆಟ್ರೋ ರೈಲು ಯೋಜನೆಯ ಪೂರ್ಣಗೊಂಡ ಭಾಗವನ್ನು ಉದ್ಘಾಟನೆ ಮಾಡಲಿದ್ದಾರೆ.

11 ಸಾವಿರ ಕೋಟಿ ರೂಪಾಯಿ ಮೌಲ್ಯದ ಪ್ರಾಜೆಕ್ಟ್ ಇದಾಗಿದ್ದು ಸದ್ಯ ಪೂರ್ಣಗೊಂಡಿರುವ 9 ಕಿ.ಮೀ ಉದ್ದದ ರೈಲ್ವೆ ಮಾರ್ಗವು ಐಐಟಿ ಕಾನ್ಪುರದಿಂದ ಮೋತಿ ಝೀಲ್ ವರೆಗೆ ಸಂಪರ್ಕಿಸುತ್ತದೆ. ಕಾನ್ಪುರದಲ್ಲಿ ಮೆಟ್ರೋ ರೈಲು ಯೋಜನೆಯ ಸಂಪೂರ್ಣ ಉದ್ದ 32 ಕಿ.ಮೀ. ಆಗಿದ್ದು, 11,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.

ಇದೇ ದಿನ ಮಧ್ಯಾಹ್ನ 1:30 ರ ಸುಮಾರಿಗೆ 1,500 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ ಬಿನಾ-ಪಂಕಿ ಮಲ್ಟಿಪ್ರೊಡಕ್ಟ್ ಪೈಪ್ ಲೈನ್ ಯೋಜನೆಯನ್ನು ಸಹ ಉದ್ಘಾಟಿಸಲಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ..

ಬಳಿಕ ಐಐಟಿ ಕಾನ್ಪುರದ 54ನೇ ಘಟಿಕೋತ್ಸವದಲ್ಲಿ ಮೋದಿ ಭಾಗವಹಿಸಲಿದ್ದಾರೆ.

Edited By : Nirmala Aralikatti
PublicNext

PublicNext

28/12/2021 08:12 am

Cinque Terre

37.7 K

Cinque Terre

0