ಬೆಳಗಾವಿ:ಬಸವರಾಜ್ ಬೊಮ್ಮಾಯಿ ಅವರ ಅಧಿಕಾರದ ಬಗ್ಗೆ ಭಾರಿ ಚರ್ಚೆ ನಡೆಯುತ್ತಲೇ ಇದೆ. ಅತೀ ಶೀಘ್ರದಲ್ಲಿಯೇ ಸಿಎಂ ಸ್ಥಾನವನ್ನ ಬಸವರಾಜ್ ಬೊಮ್ಮಾಯಿ ಕಳೆದುಕೊಳ್ತಾರೆ ಅನ್ನೋ ಮಾತು ಕೇಳಿ ಬರ್ತಾನೆ ಇದೆ.ಅದರ ಬೆನ್ನಲ್ಲಿಯೇ ಸಿಎಂ ಆರೋಗ್ಯ ಸರಿಯಿಲ್ಲ. ಅದಕ್ಕೇನೆ ಅವರು ಸಿಎಂ ಸ್ಥಾನದಿಂದ ಇಳಿಯುತ್ತಾರೆ ಅನ್ನೋ ಮಾತು ಇದೆ. ಅದಕ್ಕೇನೆ ವಿರೋಧ ಪಕ್ಷಗಳಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಸರಿಯಾಗಿಯೇ ಉತ್ತರ ಕೊಟ್ಟಿದ್ದಾರೆ.
ನನ್ನ ಆರೋಗ್ಯ ಚೆನ್ನಾಗಿಯೇ ಇದೆ. ರಾಜ್ಯದ ಆರೋಗ್ಯವೂ ಚೆನ್ನಾಗಿಯೇ ಇದೆ. ಸದನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚೆರ್ಚೆ ಮಾಡಲಾಗಿದೆ ಅಂತಲೇ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಇನ್ನು ರೈತರಿಗೆ ಒಂದೇ ತಿಂಗಳ ಪರಿಹಾರ ನೀಡಲಾಗುವುದು ಅಂತಲೂ ಸ್ಪಷ್ಟವಾಗಿಯೇ ಸಿಎಂ ಬೊಮ್ಮಯಿ ಹೇಳಿದ್ದಾರೆ.
PublicNext
25/12/2021 07:35 am