ಕೋಲ್ಕತ್ತಾ:ಕ್ರಾಂತಿಕಾರಿ ನಾಯಕ ರಿಷಿ ಅರಬಿಂದೋ ಜನ್ಮ ದಿನವನ್ನ ಸ್ಮರಿಸುವ ಬಗ್ಗೆ ಚರ್ಚಿಸಲು ಇದೇ ಡಿಸೆಂಬರ್-24 ರಂದು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿಯೇ ವಿಶೇಷ ಸಭೆ ಕರೆಯಲಾಗಿದೆ. ಆದರೆ ಈ ಸಭೆಯಲ್ಲಿ ನಾನು ಭಾಗಿ ಆಗೋದೇ ಇಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈಗ ನೇರಾ ನೇರವಾಗಿಯೇ ಹೇಳಿಬಿಟ್ಟಿದ್ದಾರೆ.
ಮುಖ್ಯಮಂತ್ರಿಗಳ ಜೊತೆಗೆ ಇತ್ತೀಚಿಗೆ ಪ್ರಧಾನಿ ಮೋದಿ ವರ್ಚುವಲ್ ಮೀಟಿಂಗ್ ಮಾಡಿದರು. ಈ ಸಭೆಯಲ್ಲಿ ಎಲ್ಲರೂ ಇದ್ದರು. ಮಮತಾ ಬ್ಯಾನರ್ಜಿ ಕೂಡ ಇದ್ದರು. ಆದರೆ ಇವರಿಗೆ ಅಲ್ಲಿ ಮಾತನಾಡಲು ಅವಕಾಶವನ್ನೇ ಕೊಡಲಿಲ್ಲ.ಅದಕ್ಕೇನೆ ಮಮತಾ ಬ್ಯಾನರ್ಜಿ ಡಿಸೆಂಬರ್-24 ವಿಶೇಷ ಸಭೆಯಲ್ಲಿ ಭಾಗಿ ಆಗೋದಿಲ್ಲ ಅಂತಲೇ ಈಗ ಹೇಳಿದ್ದಾರೆ.
ಕ್ರಾಂತಿಕಾರಿ ನಾಯಕ ರಿಷಿ ಅರಬಿಂದೋ ಅವರ ಬಗೆಗಿನ ಕಾರ್ಯಕ್ರಮದ ಬಗ್ಗೆ ಸಾಕಷ್ಟು ಪ್ಲಾನ್ ಮಾಡಿದ್ದೇವೆ. ಅದನ್ನ ಸಭೆಯಲ್ಲಿ ಹೇಳೋಕೆ ಅವಕಾಶ ಕೊಟ್ಟಿದ್ದರೆ ಅನುಕೂಲ ಆಗುತ್ತಿತ್ತು.ಆದರೆ ಅಲ್ಲಿ ಅವಕಾಶವೇ ಸಿಗಲಿಲ್ಲ. ಇನ್ನೂ ಈ ವಿಚಾರವಾಗಿ ಪ್ರಧಾನಿ ಅವರ ಈ ವಿಶೇಷ ಸಭೆಯಲ್ಲಿ ಭಾಗವಹಿಸಲು ಆಗೋದೇ ಇಲ್ಲ. ಸಾಕಷ್ಟು ಕೆಲಸಗಳೂ ಇವೆ ಅಂತಲೇ ಹೇಳಿದ್ದಾರೆ.
ಸಭೆಗೆ ಬರಲು ಅಗೋದಿಲ್ಲ ಅಂತ ಪತ್ರ ಬರೆಯಲು ಕೂಡ ಈಗಾಗಲೇ ಎಂದು ಮುಖ್ಯ ಕಾರ್ಯದರ್ಶಿ ಎಚ್.ಕೆ.ದ್ವಿವೇದಿಗೂ ತಿಳಿಸಿದ್ದಾರೆ ಮಮತಾ ಬ್ಯಾನರ್ಜಿ.
PublicNext
24/12/2021 09:32 am