ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಎಂಇಎಸ್ ಪುಂಡಾಟಿಕೆ ವಿರುದ್ಧ ಸಚಿವೆ ಶೋಭಾ ಕರಂದ್ಲಾಜೆ ಆಕ್ರೋಶ!

ಕಾಪು: ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ಮಿತಿ ಮೀರಿದೆ ,ಇದನ್ನು ತಕ್ಷಣ ನಿಲ್ಲಿಸಬೇಕು.

ಎಂಇಎಸ್ ಮಣಿಸಲು ಎಲ್ಲ ರಾಜಕೀಯ ಪಕ್ಷಗಳು ಒಟ್ಟಾಗಬೇಕು. ಕರ್ನಾಟಕದಲ್ಲಿ ಎಂಇಎಸ್ ನ ಅಗತ್ಯ ಇಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಉಡುಪಿಯ ಕಾಪುವಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವೆ , ಏಕೀಕರಣ ಬೇಕಾಗಿರೋದು ಮಹಾರಾಷ್ಟ್ರ ದಲ್ಲಿ. ನಾವು ಕನ್ನಡಿಗರು ಜಾತಿ ,ಧರ್ಮ, ಭಾಷೆ ನೋಡಲ್ಲ. ಬಾವುಟ,ವಾಹನ ಸುಡುವುದು, ಪುತ್ಥಳಿ ಒಡೆಯುವುದು ಶಿಕ್ಷಾರ್ಹ ಅಪರಾಧ.ರಾಜ್ಯದ್ರೋಹ ,ದೇಶದ್ರೋಹದ ಕೆಲಸಕ್ಕೆ ಸರಕಾರ ಸೂಕ್ತ ಶಿಕ್ಷೆ ನೀಡಬೇಕು. ಪುಂಡಾಟಿಕೆ ಮಾಡುವವರ ವಿರುದ್ಧ ಉಗ್ರ ಶಿಸ್ತುಕ್ರಮ ತಗೊಳ್ಳಿ. ಕನ್ನಡಿಗರ ಹಿತವನ್ನು ಕರ್ನಾಟಕ ಸರಕಾರ ಕಾಪಾಡಬೇಕು ಎಂದು ಉಡುಪಿಯ ಕಾಪುವಿನಲ್ಲಿ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಎಂಇಎಸ್ ವಿರುದ್ಧ ಗುಡುಗಿದ್ದಾರೆ.

Edited By : Nagesh Gaonkar
PublicNext

PublicNext

23/12/2021 03:03 pm

Cinque Terre

52.74 K

Cinque Terre

2