ಬೆಳಗಾವಿ: ಬೆಳಗಾವಿಯಲ್ಲಿ ಉದ್ಯೋಗ ಮೇಳವನ್ನು ಇಂದು ಸಿಎಂ ಉದ್ಘಾಟಿಸಿ, ಮತ್ತೆ ಅಧಿಕಾರದ ಬಗ್ಗೆ ವೈರಾಗ್ಯವಾಗಿ ಮಾತನಾಡಿದ್ದಾರೆ. ಈ ರೀತಿ ಬೊಮ್ಮಾಯಿಯವರು ಮಾತನಾಡುವುದು ಇದೇ ಮೊದಲೇನಲ್ಲಾ ಈ ಹಿಂದೆ ಕೂಡ ಇದೇ ರೀತಿ ಮಾತನಾಡಿದ್ದ ಇವರು ಎರಡನೇ ಬಾರಿ ಸಿಎಂ ಬದಲಾವಣೆಯ ಕ್ಲೂ ಕೊಟ್ಟಿದ್ದಾರೆ.
‘ಬದಲಾವಣೆ ಜಗತ್ತಿನ ನಿಯಮ’ ಬದಲಾವಣೆಗೆ ಹೊಂದಿಕೊಂಡು ಮುಂದೆ ಹೋದವರು ಯಶಸ್ಸು ಕಾಣುತ್ತಾರೆ, ಅರ್ಥ ಮತ್ತು ಪುರುಷಾರ್ಥ ಮೊದಲಿತ್ತು ಪುರುಷಾರ್ಥ ಬದಲಾಗಿ ಸ್ತ್ರೀ ಅರ್ಥ ಕೂಡ ಆಗಿದೆ
ಸಮಾಜವನ್ನ ಸಿದ್ಧ ಮಾಡುವ ಕೆಲಸ ಎಲ್ಲರೂ ಮಾಡಬೇಕು ಎಂದು ಮಾರ್ಮಿಕವಾಗಿ ಮಾತನಾಡಿದ್ದಾರೆ.
PublicNext
23/12/2021 02:15 pm