ಉತ್ತರ ಪ್ರದೇಶ: ಯೋಗಿ ಆದಿತ್ಯ ನಾಥ್ ಸರ್ಕಾರ ಈಗ ವಿದ್ಯಾರ್ಥಿಗಳಿಗೆ ಒಂದು ವಿಶೇಷ ಗಿಫ್ಟ್ ಕೊಡ್ತಿದೆ.ಈ ಮೂಲಕ ಚುನಾವಣೆ ಮುಂಚೇನೆ ವಿದ್ಯಾರ್ಥಿಗಳ ದಿಲ್ ಖುಷ್ ಮಾಡಿದ್ದಾರೆ ಮುಖ್ಯಮಂತ್ರಿ ಆದಿತ್ಯ ನಾಥ್.
ಹೌದು.ಉತ್ತರ ಪ್ರದೇಶದಲ್ಲಿ ಈಗ ವಿಧಾನಸಭಾ ಚುನಾವಣೆ ಅಬ್ಬರ ಜೋರಾಗಿದೆ. ಬಿಜೆಪಿ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ತಮ್ಮದೇ ರೀತಿಯಲ್ಲಿ ಪ್ರಚಾರದಲ್ಲಿ ತೊಡಗಿವೆ.
ಆದರೆ ಯೋಗಿ ಸರ್ಕಾರ ಒಂದು ಕೋಟಿ ವಿದ್ಯಾರ್ಥಿಗಳಿಗೆ ಉಚಿತವಾಗಿಯೇ ಸ್ಮಾರ್ಟ್ ಫೋನ್ ಕೊಡಲು ನಿರ್ಧರಿಸಿದೆ. ಅಷ್ಟೇ ಅಲ್ಲ ಟ್ಯಾಬ್ಲೆಟ್ ಗಳನ್ನೂ ಕೊಡಲು ನಿರ್ಧರಿಸಿದೆ.
ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನ ಇದೇ ಡಿಸೆಂಬರ್ 25 ಕ್ಕೆ ಇದೆ. ಈ ದಿನವೇ ಯೋಜನೆಯ ಮೊದಲ ಹಂತಕ್ಕೆ ಚಾಲನೆ ಸಿಗುತ್ತಿದ್ದು ಒಂದು ಲಕ್ಷ ಸ್ಮಾರ್ಟ್ ಫೋನ್ ಗಳನ್ನ ವಿತರಿಸಲಾಗುತ್ತಿದೆ. ಆದರೆ ಈ ಯೋಜನೆ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಅನ್ವಯವಾಗುತ್ತದೆ.
PublicNext
22/12/2021 07:52 am